550 ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ – ವೀಡಿಯೋ ವೈರಲ್

ಮುಂಬೈ: ಹುಟ್ಟುಹಬ್ಬದ ದಿನ ಏನಾದರು ನೆನಪಿನಲ್ಲಿ ಉಳಿಯುವಂತಹ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ. ಆದರೆ ಇಲ್ಲಿ ವ್ಯಕ್ತಿಯೊಬ್ಬ 550 ಕೇಕ್ ಕಟ್ ಮಾಡಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ.

ಹುಟ್ಟುಹಬ್ಬಕ್ಕೆ ಎಲ್ಲರೂ ತಮ್ಮ ಸ್ನೇಹಿತರ ಜೊತೆ ಮತ್ತು ಕುಟುಂಬದವರ ಜೊತೆ ಕೇಕ್ ಕಟ್ ಮಾಡಿ ಆಚರಣೆ ಮಾಡಿಕೊಳ್ಳುತ್ತಾರೆ. ಹೆಚ್ಚು ಎಂದರೂ 10 ಕೇಕ್ ಕಟ್ ಮಾಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ 550 ಕೇಕ್ ಕಟ್ ಮಾಡಿದ್ದು, ಆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಮುಂಬೈನ ಕಾಂಡಿವಲಿ ಪಶ್ಚಿಮ ನಿಲ್ದಾಣದ ಬಳಿ ಸೂರ್ಯ ರಾತುರಿ ತನ್ನ ಹುಟ್ಟುಹಬ್ಬವನ್ನು ಏಕಕಾಲದಲ್ಲಿ 550 ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಲಸಿಕೆ ಪಡೆಯಲು ಹೇಳಿದ್ದಕ್ಕೆ ಪೊಲೀಸರಿಗೆ ಬೆದರಿಕೆ ಹಾಕಿದ ವೃದ್ಧೆ

ಮೂರು ದೊಡ್ಡ ಟೇಬಲ್‍ಗಳಲ್ಲಿ 550 ವರ್ಣರಂಜಿತ ಕೇಕ್‍ಗಳನ್ನು ಇರಿಸಲಾಗಿದ್ದು, ಆ ಎಲ್ಲ ಕೇಕ್ ನನ್ನು ಸೂರ್ಯ ತನ್ನ ಎರಡು ಕೈಯಲ್ಲಿ ಚಾಕು ಹಿಡಿದುಕೊಂಡು ಒಂದೊಂದಾಗಿ ಕತ್ತರಿಸಿದ್ದಾರೆ. ಸೂರ್ಯ ಅವರ ಸುತ್ತಲೂ ಒಂದು ದೊಡ್ಡ ಜನಸಮೂಹ ಜಮಾಯಿಸಿದ್ದು, ಹಲವರು ತಮ್ಮ ಫೋನ್‍ಗಳಲ್ಲಿ ಈ ವಿಶೇಷ ದಿನವನ್ನು ಸೆರೆ ಹಿಡಿದಿದ್ದಾರೆ.

ಈ ವೀಡಿಯೋ ವೀಕ್ಷಿಸಿದ ಜನರು, ಆಚರಣೆ ವೇಳೆ ಯಾರಲ್ಲೂ ಸಾಮಾಜಿಕ ಅಂತರ ಕಾಣಿಸುತ್ತಿಲ್ಲ. ಅದರಲ್ಲಿಯೂ ಒಬ್ಬರ ಮುಖದ ಮೇಲೆಯೂ ಮಾಸ್ಕ್ ಇಲ್ಲ. ಕೊರೊನಾ ನಿಯಮವನ್ನು ಯಾರು ಪಾಲಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಗೊಬ್ಬರವೆಂದು ಮಾರಾಟ – ಆರೋಪಿಗಳು ಪೊಲೀಸರ ಬಲೆಗೆ

Comments

Leave a Reply

Your email address will not be published. Required fields are marked *