ಬುಮ್ರಾ ಆರ್‌ಸಿಬಿಗೆ ಹೋಗ್ತಾರಾ? ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಮುಂಬೈ ಇಂಡಿಯನ್ಸ್

ನವದೆಹಲಿ: ಮುಂಬೈ ಇಂಡಿಯನ್ಸ್ ಆಟಗಾರರು ಹಬ್ಬಕ್ಕೂ ಮುನ್ನವೇ ದೀಪಾವಳಿ ಸಂಭ್ರಮಿಸಿದ್ದು, ತಂಡದ ಫ್ರಾಂಚೈಸಿ ಮಾಲೀಕ ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಕೂಡ ಆಟಗಾರರಿಗೆ ಸಾಥ್ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಕೋಚ್ ಮಹೇಲ ಜಯವರ್ಧನೆ ಸೇರಿದಂತೆ ತಂಡಕ್ಕೆ ಲಭ್ಯವಿರುವ ಆಟಗಾರರು ದೀಪಾವಳಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಮುಂಬೈ ಇಂಡಿಯನ್ಸ್ ತಂಡದ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ಮೊದಲ ಮಹಿಳಾ ಸಹಾಯಕ ಸಿಬ್ಬಂದಿಯನ್ನು ನೇಮಿಸಿದ ಆರ್‌ಸಿಬಿ

ಈ ಸಂಭ್ರಮದ ಫೋಟೋಗಳನ್ನು ಮುಂಬೈ ಇಂಡಿಯನ್ಸ್ ತನ್ನ ಟ್ವಿಟ್ಟರ್ ಖಾತೆ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಟೀಂ ಇಂಡಿಯಾ ವೇಗಿ, ಮುಂಬೈ ಇಂಡಿಯನ್ಸ್ ನ ಪ್ರಮುಖ ಆಟಗಾರ ಜಸ್ಪ್ರಿತ್ ಬುಮ್ರಾ ಫೋಟೋದಲ್ಲಿ ಕಾಣಿಸಿಕೊಳ್ಳದೆ ಇರುವುದನ್ನು ಗಮನಿಸಿದ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ: ಕೊಹ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ: ಆರ್‌ಸಿಬಿ ಸ್ಪಷ್ಟನೆ

ಜಸ್ಪ್ರಿತ್ ಬುಮ್ರಾ ಎಲ್ಲಿದ್ದಾರೆ? ಅವರು ಆರ್‌ಸಿಬಿ ತಂಡವನ್ನು ಹೋಗುತ್ತಾರಾ ಎಂದು ಪ್ರವೀಣ್ ಕುಮಾರ್ ಎಂಬವರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ ಅವರ ಜಿಪ್ ಇಮೇಜ್ ಟ್ವೀಟ್ ಮಾಡಿ, ಸ್ವಲ್ಪ ತಾಳ್ಮೆಯಿಂದ ಇರಿ (ಶಾಂತವಾಗಿರಿ) ಎಂದು ಉತ್ತರಿಸಿದೆ. ಈ ಮೂಲಕ ಜಿಸ್ಪ್ರಿತ್ ಬುಮ್ರಾ ಅವರನ್ನು ತಂಡದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮುಂಬೈ ಇಂಡಿಯನ್ಸ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ:  ವರ್ಷದ ವಿಸ್ಡೆನ್ ಇಂಡಿಯಾ ಕ್ರಿಕೆಟರ್ಸ್ ಆದ ಬುಮ್ರಾ, ಮಂಧಾನಾ

Comments

Leave a Reply

Your email address will not be published. Required fields are marked *