ಅಜ್ಜಿ, ಅಮ್ಮ ಸೇರಿ ಒಂದು ದಿನದ ಗಂಡು ಶಿಶುವನ್ನು ಕತ್ತುಸೀಳಿ ಕೊಂದೇ ಬಿಟ್ರು!

ಮುಂಬೈ: ಹುಟ್ಟಿ ಒಂದು ದಿನವಾದಗಲೇ ಗಂಡು ಶಿಶುವನ್ನು ಕತ್ತುಸೀಳಿ ಕೊಂದು ಬಳಿಕ ಕಸದತೊಟ್ಟಿಯಲ್ಲಿ ಹಾಕಿದ ಅಮಾನವೀಯ ಘಟನೆಯೊಂದು ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಶಿಶುವಿನ ಅಜ್ಜಿ 50 ವರ್ಷದ ಶಾಂತ ಸಪ್ನಾ ನ್ಯಾನರ್ಜಿ ಹಾಗೂ ಈಕೆಯ ಮಗಳ ಗೆಳೆಯ ಮಹೇಶ್ ಪಾಂಡೆಯನ್ನು ಕಲ್ಯಾನ್ ಕೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಸದ್ಯ ಇವರಿಬ್ಬರನ್ನು ಅಕ್ಟೋಬರ್ 17ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಶುವಿನ ತಾಯಿಯನ್ನೂ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಬಂಧಿಸಲಾಗುವುದು ಅಂತ ಪೊಲೀಸರು ತಿಳಿಸಿದ್ದಾರೆ.

ಶಿಶುವಿನ ತಾಯಿ ಬ್ಯಾಂಕಿಂಗ್ ಹಾಗೂ ಇನ್ಶುರೆನ್ಸ್ ವಿಭಾಗದಲ್ಲಿ ಪದವಿ ಪಡೆದವಳಾಗಿದ್ದು, ಒಂದೊಳ್ಳೆಯ ಕುಟುಂಬದಿಂದ ಬಂದವಳೇ ಆಗಿದ್ದಾಳೆ. ಅಕ್ಟೋಬರ್ 9ರಂದು ಸುಮಾರು 10.15ರ ವೇಳೆಗೆ ಮನ್ಪದಾದಲ್ಲಿರೋ ಕಸದ ತೊಟ್ಟಿಯಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಆಗ ತಾನೇ ಹುಟ್ಟಿದ ಶಿಶುವಿನ ದೇಹವೊಂದು ದೊರೆದಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳನ್ನು ವಿಚಾರಣೆ ನಡೆಸಿದ್ದೆವು. ಈ ವೇಳೆ ಕೆಲ ದಿನಗಳ ಹಿಂದೆಯಷ್ಟೇ 20 ವರ್ಷದ ಅವಿವಾಹಿತೆ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿರುವ ಕುರಿತು ಮಾಹಿತಿ ದೊರೆಯಿತು. ಹೀಗಾಗಿ ಆ ಮಹಿಳೆ ಮತ್ತು ಆಕೆಯ ತಾಯಿಯನ್ನು ಪ್ರಶ್ನಿಸಿದಾಗ ಘಟನೆಯ ಬಗ್ಗೆ ವಿವರಣೆ ನೀಡಿ ತಮ್ಮ ತಮ್ಮನ್ನು ಒಪ್ಪಿಕೊಂಡರು. ಸದ್ಯ ಆರೋಪಿಗಳನ್ನು ಪನ್ಪದಾ ಪೊಲೀಸರಿಗೆ ಹಸ್ತಾಂತರಿಸಿರುವುದಾಗಿ ಹಿರಿಯ ಪೊಲಿಸ್ ಅಧಿಕಾರಿ ಸಂಜು ಜಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ. ಯಾಕೆ ಶಿಶುವನ್ನು ಕೊಲೆ ಮಾಡಿದ್ದಾರೆ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ ಅಂತ ಪನ್ಪದಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ ಶೆಂಧೆ ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *