ಮರಾಠಿಯಲ್ಲಿ ಮಾತಾಡು, ಇಲ್ಲದಿದ್ರೆ ಹಣ ಕೊಡಲ್ಲ; ಪಿಜ್ಜಾ ಡೆಲಿವರಿ ಬಾಯ್‌ಗೆ ದಂಪತಿ ಧಮ್ಕಿ

ಮುಂಬೈ: ಮರಾಠಿಯಲ್ಲಿ ಮಾತನಾಡು.. ಇಲ್ಲದಿದ್ದರೆ ಬಿಲ್‌ ಹಣ ಕೊಡಲ್ಲ ಎಂದು ಪಿಜ್ಜಾ ಡೆಲಿವರಿ ಬಾಯ್‌ಗೆ ಮುಂಬೈ ದಂಪತಿ ಧಮ್ಕಿ ಹಾಕಿರುವ ಘಟನೆ ನಡೆದಿದೆ.

ಮುಂಬೈನ ಉಪನಗರ ಭಾಂಡಪ್‌ನಲ್ಲಿರುವ ಸಾಯಿ ರಾಧೆ ಕಟ್ಟಡದಲ್ಲಿ ಘಟನೆಯಾಗಿದೆ ಎಂದು ವರದಿಯಾಗಿದೆ. ಪಿಜ್ಜಾ ಡೆಲಿವರಿ ಬಾಯ್‌ ಆರ್ಡರ್‌ ಕೊಡಲು, ರೋಹಿತ್ ಲಾವಾರೆ ಅವರ ಮನೆ ಬಾಗಿಲಿಗೆ ಬಂದಾಗ ‘ಮರಾಠಿಯಲ್ಲಿ ಮಾತನಾಡು ಇಲ್ಲ ಅಂದ್ರ ಹಣ ಕೊಡಲ್ಲ ಎಂದು ಬೆದರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ʻಆಪರೇಷನ್‌ ಸಿಂಧೂರʼ ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ – ಟೆಕ್ಕಿ ಅರೆಸ್ಟ್‌

ಮರಾಠಿಯಲ್ಲಿ ಮಾತನಾಡಲೇಬೇಕು ಅಂತ ಕಡ್ಡಾಯ ಇದೆಯೇ? ಏಕೆ? ಎಂದು ಪಿಜ್ಜಾ ಡೆಲಿವರಿ ಬಾಯ್‌ ಕೇಳಿದ್ದಾನೆ. ಅದಕ್ಕೆ ಮರಾಠಿ ದಂಪತಿ, ಹೌದು ಇಲ್ಲಿ ಹಾಗೆಯೇ ಇದೆ ಎಂದು ಹೇಳುತ್ತಾರೆ.

ಹೀಗೆ ಮರಾಠಿ ಭಾಷಾ ವಿಷಯವಾಗಿ ಡೆಲಿವರಿ ಬಾಯ್‌ ಜೊತೆ ದಂಪತಿ ಜಗಳ ತೆಗೆದಿದ್ದಾರೆ. ಈ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಪಾಕ್‌ ನ್ಯೂಕ್‌ ವೆಪನ್‌ ಫೆಸಿಲಿಟಿ ಮೇಲೆ ದಾಳಿಯಾಗಿದೆ, ಭಾರತಕ್ಕೆ ಜಯ ಸಿಕ್ಕಿದೆ: ಟಾಮ್‌ ಕೂಪರ್‌

ಕೊನೆಗೂ ಡೆಲಿವರಿ ಬಾಯ್‌ ಹಣವಿಲ್ಲದೇ ಹಿಂತಿರುಗಿದ್ದಾರೆ. ಘಟನೆ ಸಂಬಂಧ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.