ಮುಂಬೈ ಸಿನಿಮಾವಾಲಾಗಳು ಸತ್ಯವನ್ನು ಸುಳ್ಳು ಮಾಡುವ ಕೆಟ್ಟ ಚಾಳಿ ಕಲ್ತಿದ್ದಾರೆ: ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಗರಂ

ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ವಕೀಲರೂ ಆಗಿರುವ ಸುಬ್ರಮಣಿಯನ್‌ ಸ್ವಾಮಿ ಬಾಲಿವುಡ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಮುಂಬೈ ಸಿನಿಮಾವಾಲಾಗಳು ಸತ್ಯವನ್ನು ಸುಳ್ಳುವ ಮಾಡುವ ಕೆಟ್ಟ ಚಾಳಿಯನ್ನು ಹೊಂದಿದ್ದಾರೆ. ಅವರಿಗೆ ಸತ್ಯವನ್ನು ಹೇಳುವುದಕ್ಕೆ ಬರುವುದಿಲ್ಲ. ಹಾಗಾಗಿ ಅಕ್ಷಯ್ ಕುಮಾರ್ ಸೇರಿದಂತೆ ಎಂಟು ಜನರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದ್ದಾರೆ. ಕಥೆ ತಿರುಚಿದ ಆರೋಪವನ್ನೂ ಅವರು ಮಾಡಿದ್ದಾರೆ.

ಸದ್ಯ ಸತತ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್ ಕುಮಾರ್ ರಾಮ್ ಸೇತು ಸಿನಿಮಾದ ಬಿಡುಗಡೆಯ ಕನಸು ಕಾಣುತ್ತಿದ್ದಾರೆ. ಈ ಸಿನಿಮಾವಾದರೂ ಗೆಲುವು ತಂದು ಕೊಡುತ್ತಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ ಈ ಸಿನಿಮಾ ಗೆಲುವಾಗಲಿದೆ ಎಂದು ಕನಸು ಕಂಡ ಅಕ್ಷಯ್ ಕುಮಾರ್ ಗೆ ಶಾಕ್ ನೀಡಿದ್ದಾರೆ ಸುಬ್ರಮಣಿಯನ್‌ ಸ್ವಾಮಿ. ರಾಮ್ ಸೇತು ವಿಚಾರವಾಗಿ ಸಿನಿಮಾದಲ್ಲಿ ತಿರುಚಿದ ಮಾಹಿತಿಯನ್ನು ಸೇರಿಸಲಾಗಿದೆ ಎನ್ನುವ ಕಾರಣಕ್ಕೆ ನೋಟಿಸ್ ನೀಡಿದ್ದಾರೆ.

ಅಕ್ಷಯ್ ಕುಮಾರ್, ನುಶ್ರತ್ ಬರೂಚಾ, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಎಂಟು ಮಂದಿಗೆ ಈಗಾಗಲೇ ನೋಟಿಸ್ ನೀಡಿದ್ದು, ಬೌದ್ಧಿಕ ಆಸ್ತಿ ಹಕ್ಕಿನ ಮಹತ್ವ ತಿಳಿಸುವುದಕ್ಕಾಗಿ ಈ ರೀತಿ ನೋಟಿಸ್ ಕೊಟ್ಟಿರುವುದಾಗಿ ಸ್ವಾಮಿ ತಿಳಿಸಿದ್ದಾರೆ. ಆ ನೋಟಿಸ್ ಅನ್ನು ಸ್ವಾಮಿ ಸಹವೃತ್ತಿಕರ್ಮಿ ಆಗಿರುವ ಸತ್ಯ ಸಬರ್ವಾಲ್ ಅವರ ಮೂಲಕ ಜಾರಿಗೊಳಿಸಿದ್ದಾರೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಸೀರಿಯಲ್ ಗೆ ನಟ ಹರೀಶ್ ರಾಜ್ ಅಧಿಕೃತ ಎಂಟ್ರಿ: ಪ್ರೊಮೋ ರಿಲೀಸ್

ರಾಮಸೇತುವನ್ನು ಹಾಳು ಮಾಡುವ ಉದ್ದೇಶದಿಂದ ಆಗಿನ ಕೇಂದ್ರ ಸರಕಾರವು ಸೇತು ಸಮುದ್ರಂ ಶಿಪ್ ಚಾನೆಲ್ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಅದನ್ನು ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ತಡೆಯಾಜ್ಞೆ ತರುವಲ್ಲಿ ಸ್ವಾಮಿ ಸಾಕಷ್ಟು ಶ್ರಮ ವಹಿಸಿದ್ದರು. ಇದೀಗ ಅದೇ ಹೆಸರಿನಲ್ಲಿ ಸಿನಿಮಾ ಮೂಡಿ ಬರುತ್ತಿರುವುದರಿಂದ, ಈ ವಿಷಯ ಸಿನಿಮಾದಲ್ಲಿ ಇದೆಯಾ? ಇದ್ದರೆ ಪ್ರಮುಖ ಪಾತ್ರ ವಹಿಸಿದ್ದ ಸ್ವಾಮಿ ಅವರ ಪಾತ್ರವೂ ಇರಬೇಕಲ್ಲ? ಹೀಗೆ ನಾನಾ ಪ್ರಶ್ನೆಗಳನ್ನು ಹಾಕಿ, ಸಿನಿಮಾ ರಿಲೀಸ್ ಗೂ ಮುನ್ನ ಸ್ವಾಮಿಗಳಿಗೆ ಈ ಸಿನಿಮಾ ತೋರಿಸ್ಬೇಕು ಎಂದು ವಕೀಲರು ನೋಟಿಸ್ ನಲ್ಲಿ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *