ಮುಂಬೈಯಲ್ಲಿ ಧಗಧಗನೇ ಹೊತ್ತಿ ಉರಿದ ವಿಮಾನ: ಐವರು ಸಾವು- ವಿಡಿಯೋ ನೋಡಿ

ಮುಂಬೈ: ಗುರುವಾರ ಮಧ್ಯಾಹ್ನ ಖಾಸಗಿ ಕಂಪೆನಿಯ ಲಘು ವಿಮಾನ ಪತನ ಹೊಂದಿ ಐವರು ಸಾವನ್ನಪ್ಪಿದ ದಾರುಣ ಘಟನೆ ಮುಂಬೈ ಪಟ್ಟಣದಲ್ಲಿ ನಡೆದಿದೆ.

ನಾಲ್ಕು ಜನರಿದ್ದ ವಿಮಾನವು ಮುಂಬೈನ ಘಟಕೋಪರ್ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದಕ್ಕೆ ಅಪ್ಪಳಿಸಿದೆ. ಬೀಚ್ ಕ್ರಾಫ್ಟ್ ಕಿಂಗ್ ಏರ್ ಸಿ 90 ಟರ್ಬೋಪ್ರಾಪ್ ಹೆಸರಿನ ವಿಮಾನ ಅಪಘಾತಕ್ಕೀಡಾದ ಪರಿಣಾಮ ವಿಮಾನದಲ್ಲಿದ್ದ ನಾಲ್ವರು ಹಾಗೂ ಓರ್ವ ಪಾದಚಾರಿಯೂ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.

ವಿಮಾನ ಪತನಗೊಳ್ಳುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ದಟ್ಟವಾದ ಹೊಗೆ ಸುತ್ತಲಿನ ಪ್ರದೇಶವನ್ನು ಆವರಿಸಿಕೊಂಡಿತು. ಹಲವಾರು ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.

ಮುಂಬೈನಲ್ಲಿ ಈ ವಾರದಲ್ಲಿ ಸಂಭವಿಸುತ್ತಿರುವ ಎರಡನೇ ಅಪಘಾತವಾಗಿದೆ. ಬುಧವಾರದಂದು ಸುಖೋಯ್ ಜೆಟ್ ವಿಮಾನ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿತ್ತು.

Comments

Leave a Reply

Your email address will not be published. Required fields are marked *