ಬೆಕ್ಕನ್ನು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದವನಿಗೆ 9 ಸಾವಿರ ದಂಡ

ಮುಂಬೈ: 2018 ರಲ್ಲಿ ಬೆಕ್ಕನ್ನು ಸ್ಕ್ರೂಡ್ರೈವರ್‌ನಿಂದ  ಚುಚ್ಚಿ ಕೊಂದವನಿಗೆ ಮುಂಬೈ ಕೋರ್ಟ್ 9,150 ರೂ. ದಂಡ ಹಾಕಿದೆ.

40 ವರ್ಷ ಸಂಜಯ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು ಕೋರ್ಟ್ ದಂಡ ವಿಧಿಸಿದೆ. ಈತ 2018 ಮೇ 14 ರಂದು ತನ್ನ ಮನೆಗೆ ಬಂದ ಬೆಕ್ಕನ್ನು ಸ್ಕ್ರೂಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಿದ್ದ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಜಯ್ ವಿರುದ್ಧ ಆರ್.ಸಿ.ಎಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೇ 14 ರಂದು ಮನೆಗೆ ಬಂದು ಮನೆಯಲ್ಲಿ ಆಟವಾಡುತ್ತಿದ್ದ ಬೆಕ್ಕನ್ನು ಸಂಜಯ್ ಗಡೆ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಸಾಯಿಸಿ ಹಾಕಿದ್ದ. ನಂತರ ಆದರ ಮೃತದೇಹವನ್ನು ಕೋಲಿನ ಮೇಲೆ ಇಟ್ಟುಕೊಂಡು ಅದನ್ನು ಬಿಸಾಡಲು ಹೋಗಿದ್ದಾನೆ. ಈ ಸಮಯದಲ್ಲಿ ಸ್ಥಳೀಯರು ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ಫೋಟೋ ವೈರಲ್ ಆದ ನಂತರ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ನಿರಾಲಿ ಕೊರಡಿಯಾ ಅವರು ಸಂಜಯ್ ವಿರುದ್ಧ ಮೇ 21, 2018 ರಂದು ದೂರು ನೀಡಿದ್ದರು. ಇದನ್ನು ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

ದೂರನ್ನು ದಾಖಲಿಸಿಕೊಂಡ ಪೊಲೀಸರು ಸಂಜಯ್ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಕಟ್ಟುವ ಕಾಯ್ದೆ ಮತ್ತು ವಿವಿಧ ವಿಭಾಗಗಳ ಆಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋವನ್ನು ಸಾಕ್ಷಿಯಾಗಿ ನೀಡಿದ್ದರು. ಇಂದು ಈ ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಸಂಜಯ್ ಗಡೆಗೆ 9,150 ರೂ. ದಂಡ ವಿಧಿಸಿದ್ದಾರೆ.

ಪೊಲೀಸರು ನೀಡಿರುವ ಸಾಕ್ಷಿಯನ್ನು ಪರಿಶೀಲನೆ ಮಾಡಿದರೆ ಸಂಜಯ್ ಗಡೆ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಆದರೆ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿ ಇಲ್ಲದ ಕಾರಣ ಆತನಿಗೆ ಕೇವಲ ದಂಡ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *