ಕ್ಯಾನ್ಸರ್‌ನಿಂದ  ಬಳಲುತ್ತಿದ್ದ ನಟ ಸಿದ್ದಿಕಿ ಸಹೋದರಿ ಸಾವು

ಮುಂಬೈ: 8 ವರ್ಷದದಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಇಂದು ಮೃತಪಟ್ಟಿದ್ದಾರೆ.

ನಟನ ಸಹೋದರಿ ತಮ್ಶಿ ಸಿದ್ದಿಕಿ (26) ಅವರು ಇಂದು ಸಾವನ್ನಪ್ಪಿದ್ದಾರೆ. 18 ವರ್ಷ ವಯಸ್ಸಿನಲ್ಲಿಯೇ ತಮ್ಶಿ ಸಿದ್ದಿಕಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ತಮ್ಶಿ ಸುಮಾರು 8 ವರ್ಷಗಳ ಕಾಲ ಕಾಯಿಲೆ ವಿರುದ್ಧ ಹೋರಾಡಿ ಇಂದು ಸಾವನ್ನಪ್ಪಿದ್ದಾರೆ.

ಸಹೋದರಿಯ ಸಾವಿನ ಸಮಯದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ಅಮೆರಿಕದಲ್ಲಿ ನೋ ಲ್ಯಾಂಡ್ಸ್ ಮ್ಯಾನ್ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇಂದು ತಮ್ಮ ಸ್ವಗ್ರಾಮ ಉತ್ತರ ಪ್ರದೇಶದ ಬುಧಾನ ಗ್ರಾಮದಲ್ಲಿ ಅಂತ್ಯಕ್ರಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ಹಿಂದೆ ನಟ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಸಹೋದರಿಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ತಾನು ಮತ್ತು ಸಹೋದರಿ ತಮ್ಶಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದ ಸಿದ್ದಿಕಿ, ನನ್ನ ಸಹೋದರಿ ಆಕೆಯ 18 ವಯಸ್ಸಿನಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಜೊತೆಗೆ ಕಾಯಿಲೆಯ ವಿರುದ್ಧ ತಮ್ಮ ಮನೋಬಲ ಮತ್ತು ಅತ್ಮವಿಶ್ವಾಸದಿಂದ ಹೋರಾಡುತ್ತಾ ಬಂದಿದ್ದಾರೆ. ಅವಳಿಗೆ ಇಂದಿಗೆ 25 ವರ್ಷ ತುಂಬಿತು ಎಂದು ಬರೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *