Mumbai Boat Accident | ಪ್ರಯಾಣಿಕ ಹಡಗಿಗೆ ನೌಕಾಪಡೆಯ ಬೋಟ್‌ ಡಿಕ್ಕಿ; 13 ಮಂದಿ ದಾರುಣ ಸಾವು

ಮುಂಬೈ: ನೀಲಕಮಲ್ ಎಂಬ ಪ್ರಯಾಣಿಕ ಹಡಗಿಗೆ ನೌಕಾಪಡೆಯ ಬೋಟ್‌ ಡಿಕ್ಕಿ ಹೊಡೆದು 13 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಮುಂಬೈ (Mumbai Boat Accident) ಕರಾವಳಿಯಲ್ಲಿ ನಡೆದಿದೆ.

ಅವಘಡದಲ್ಲಿ 101 ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ತಿಳಿಸಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ವಿಜಯ್ ಮಲ್ಯ, ನೀರವ್ ಮೋದಿ ಅವರ 15,000 ಕೋಟಿ ಆಸ್ತಿ ಬ್ಯಾಂಕ್‌ಗಳಿಗೆ ವಾಪಸ್‌: ಕೇಂದ್ರ ಸರ್ಕಾರ

ಮೃತರಲ್ಲಿ 10 ನಾಗರಿಕರು ಮತ್ತು ಮೂವರು ನೌಕಾಪಡೆ ಸಿಬ್ಬಂದಿ ಸೇರಿದ್ದಾರೆ ಎಂದು ಫಡ್ನವಿಸ್ ನಾಗ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ನೌಕಾಪಡೆಯ ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ 7:30 ರ ಹೊತ್ತಿಗೆ ಸಾವಿನ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.

ನೀಲಕಮಲ್ ಹಡಗು ಮುಂಬೈ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಎಲಿಫೆಂಟಾ ದ್ವೀಪಗಳಿಗೆ ತೆರಳುತ್ತಿದ್ದಾಗ ಸ್ಪೀಡ್ ಬೋಟ್ ಸಂಜೆ 4 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದೆ ಎಂದು ಫಡ್ನವಿಸ್ ಹೇಳಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಕಥುವಾದಲ್ಲಿ ಮನೆಗೆ ಬೆಂಕಿ – ಮಾಜಿ ಡಿಎಸ್‌ಪಿ ಸೇರಿ 6 ಮಂದಿ ಸಾವು

ಸ್ಪೀಡ್ ಬೋಟ್ ನೌಕಾಪಡೆಗೆ ಸೇರಿದ್ದು ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿಕೊಂಡಿದ್ದು, ಈ ಬಗ್ಗೆ ನೌಕಾಪಡೆಯಿಂದ ಯಾವುದೇ ದೃಢೀಕರಣವಿಲ್ಲ. 4 ನೌಕಾ ಹೆಲಿಕಾಪ್ಟರ್‌ಗಳು, 11 ನೌಕಾ ಕ್ರಾಫ್ಟ್‌ಗಳು, ಒಂದು ಕೋಸ್ಟ್ ಗಾರ್ಡ್ ಬೋಟ್ ಮತ್ತು ಮೂರು ಮೆರೈನ್ ಪೊಲೀಸ್ ಕ್ರಾಫ್ಟ್‌ಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಜೆಎನ್‌ಪಿಟಿ ಆಸ್ಪತ್ರೆಗೆ 56, ನೇವಿ ಡಕ್‌ಯಾರ್ಡ್‌ ಆಸ್ಪತ್ರೆಗೆ 21, ಅಶ್ವಿನಿ ಆಸ್ಪತ್ರೆ-1, ಸೇಂಟ್‌ ಜಾರ್ಜ್‌ ಆಸ್ಪತ್ರೆ-9, ಕಾರಂಜೆ ಆಸ್ಪತ್ರೆಗೆ -12, ಎನ್‌ಡಿಕೆ ಆಸ್ಪತ್ರೆಗೆ 10 ಗಾಯಾಳುಗಳನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ವಕ್ಫ್ ವಿಚಾರದಲ್ಲಿ ರಕ್ಷಿಸಲು ಕಾಂಗ್ರೆಸ್ ನಾಯಕರು ವಿಜಯೇಂದ್ರ ಸಂಬಂಧಿಗಳೇ?: ಎಂಪಿ ರೇಣುಕಾಚಾರ್ಯ