ಮುತ್ಯಾಲಮಡುವು ಗಡಿಭಾಗದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ಮುತ್ಯಾಲಮಡುವು ವ್ಯಾಪ್ತಿಯಲ್ಲಿ ಇಂದು ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಯಿತು.

ವಣಕನಹಳ್ಳಿ ಗ್ರಾಮಪಂಚಾಯತಿಯ ಚೂಡೇನ ಹಳ್ಳಿ, ಸುಣವಾರ, ಸೋಲೂರು, ಮೆಣಸನಹಳ್ಳಿ, ಪಣಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನ ಅಭಾವ ಬಹಳಷ್ಟು ಇದ್ದು, ಈ ಸಮಸ್ಯೆಯನ್ನು ನೀಗಿಸಲು ಹಲವು ವರ್ಷಗಳಿಂದ ಪಂಚಾಯತಿ ಅಧಿಕಾರಿಗಳು ಹಾಗೂ ಸದಸ್ಯರು ಸಾಕಷ್ಟು ಪ್ರಯತ್ನ ಪಡುತ್ತಿದ್ದರು. ಈ ವಿಚಾರವಾಗಿ ಈಗಾಗಲೇ ಅನೇಕ ಬಾರಿ ಚರ್ಚೆಗಳಾಗಿದ್ದರೂ, ಸಹ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಗಿಣಿರಾಮನ ರಾಣಿಗೆ ಮೋಹಕ ತಾರೆ ಕೊಟ್ರು ಕಾಂಪ್ಲಿಮೆಂಟ್

ಇದೀಗ ಒಂದು ಖಾಸಗಿ ಕಂಪನಿ ಕಾಂಟಿನೆಂಟಲ್ ಪ್ರೈವೇಟ್ ಲಿಮಿಟೆಡ್ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಸಲುವಾಗಿ ಚೆಕ್ ಡ್ಯಾಮ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಈ ಕಂಪನಿ ಸುಮಾರು ನಾಲ್ಕು ದಶಲಕ್ಷ ಲೀಟರ್ ನಷ್ಟು ನೀರು ಶೇಖರಣೆಯಾಗುವಂತಹ ಚೆಕ್ ಡ್ಯಾಂ ನಿರ್ಮಾಣಕ್ಕೆ ಮುಂದಾಗಿದ್ದು, ವನಕನಹಳ್ಳಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಇಂದು ಗುದ್ದಲಿ ಪೂಜೆ ನೆರವೇರಿದೆ.

ಚೂಡೇನಹಳ್ಳಿ ಗ್ರಾಮದ ಪಕ್ಕದಲ್ಲಿ ಮುತ್ಯಾಲಮಡು ಜಲಪಾತದ ಕಾಲುವೆ ಹಾದು ಹೋಗುತ್ತಿದ್ದು, ಇದೇ ನೀರಿಗೆ ಸಿಎಸ್‌ಆರ್ ಫಂಡ್ ಮೂಲಕ ಕಾಂಟಿನೆಂಟಲ್ ಪ್ರೈವೇಟ್ ಲಿಮಿಟೆಡ್ ಚೆಕ್ ಡ್ಯಾಂ ನಿರ್ಮಾಣ ಮಾಡಲು ಮುಂದಾಗಿದೆ. ಈ ನೀರು ಶೇಖರಣೆಯಾದರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಹಳ್ಳಿಗಳಿಗೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಇದನ್ನೂ ಓದಿ: ಆನ್‍ಲೈನ್ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ವಿಶೇಷ ತರಬೇತಿ ನೀಡಿದ ಸುರಾನ ವಿದ್ಯಾಲಯ

ಜೊತೆಗೆ ಕೃಷಿ ಚಟುವಟಿಗೆಗಳಿಗೆ ಉಪಯೋಗವಾಗುತ್ತದೆ. ಕೇವಲ ಎರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯ ಮುಗಿದು ಡ್ಯಾಂ ನೀರು ಬಳಸುವಂತೆ ಆಗುತ್ತೆ ಎಂದು ಕಂಪೆನಿ ಭರವಸೆಯನ್ನು ನೀಡಿದೆ. ಇದರಿಂದ ಅಲ್ಲಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ ಎಂದು ಪಂಚಾಯತಿ ಅಧ್ಯಕ್ಷರು ಅನುಪಮಾ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *