ಸ್ವಾಮೀಜಿಗಳು ಆಶೀರ್ವಾದ ಮಾಡಿದ್ರೆ, ಯೋಗ್ಯ ಅಂದ್ರೆ ಜನರ ವೋಟು ಗ್ಯಾರಂಟಿ: ಮುಖ್ಯಮಂತ್ರಿ ಚಂದ್ರು

ಚಿತ್ರದುರ್ಗ: ಸ್ವಾಮೀಜಿಗಳು ಆಶೀರ್ವಾದ ಮಾಡಿದ್ರೆ, ಇವನು ಯೋಗ್ಯ ಅಂದ್ರೆ ಜನರು ಗ್ಯಾರಂಟಿ ವೋಟ್ ಹಾಕುತ್ತಾರೆ ಅಂತ ಹೇಳ್ತಾರೆ. ಹಾಗಾಗಿ ಸ್ವಾಮೀಜಿಗಳು ಅಯೋಗ್ಯರ ಪರ ಪ್ರಚಾರ ಮಾಡಬೇಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು (Mukhyamantri Chandru) ಮನವಿ ಮಾಡಿದರು.

ಚಿತ್ರದುರ್ಗದ (Chitradurga) ಭರಮಸಾಗರದಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮೀಜಿಗಳೇ ನೀವು ಅಯೋಗ್ಯರ ಪರ ನೀವು ಯಾಕೆ ಪ್ರಚಾರ ಮಾಡುತ್ತೀರಾ? ಇನ್ಮೇಲೆ ಇಂತಹ ಕೆಲಸ ಮಾಡಬೇಡಿ. ಈಗಿರುವ ಪಕ್ಷಗಳು ಯೋಗ್ಯವಲ್ಲ ಅಂತ ಬಹಿರಂಗವಾಗಿ ಆಗದಿದ್ರೆ ಗುಟ್ಟಾಗಿಯಾದರು ನೀವು ಹೇಳಬೇಕು ಎಂದರು. ಇದನ್ನೂ ಓದಿ: ಸಿಎಂ ನೈತಿಕತೆ ಕಳೆದುಕೊಂಡಿದ್ದಾರೆ, ಮುಡಾ ಕೇಸ್‌ ಸಿಬಿಐಗೆ ಹೋಗೋದು ನಿಶ್ಚಿತ: ಸ್ನೇಹಮಹಿ ಕೃಷ್ಣ

ಕಾಂಗ್ರೆಸ್‌ನಲ್ಲಿ ಸಿಎಂ ಯಾರಾಗಬೇಕು, ಯಾರನ್ನು ಕಿತ್ತುಹಾಕಬೇಕೆಂಬ ಹೋರಾಟ ನಡೆಯುತ್ತಿದೆ. ವಿಪಕ್ಷದಲ್ಲಿ ಪಾರ್ಟಿ ಅಧ್ಯಕ್ಷ ಯಾರಾಗಬೇಕು, ಆಗದೇ ಇರೋರು ಯಾರಾಗಬೇಕು ಅಂತಿದ್ರೆ, ಇನ್ನೊಬ್ರು ಹೇಳ್ತಾರೆ ಯಾರು ಹೇಗಾದರೂ ಹಾಳಾಗಲಿ ನಾನು, ನನ್ನ ಮಗ, ಮೊಮ್ಮಗ ಏನು ಬೇಕಾದರು ಆಗಲು ಅನುಕೂಲ ಮಾಡಿಕೊಡಿ ಅಂತ ಹೇಳುತ್ತಾರೆ ಎಂದು ಮೂರು ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪರ ಸ್ತ್ರೀ ಜೊತೆ ಸಲುಗೆ – ಪತಿಯ ಕಾಲು ಮುರಿಯಲು ಪತ್ನಿಯಿಂದಲೇ 5 ಲಕ್ಷಕ್ಕೆ ಸುಪಾರಿ

ಇನ್ನು ಕೆಲವರು ನಾನು, ನನ್ನ ಮಗ, ತಮ್ಮ, ಮೊಮ್ಮಗ, ಅಕ್ಕ, ಅಮ್ಮನ್ನೇ ಎಂಎಲ್‌ಎ ಮಾಡೋಣ ಅಂತಾರೆ. ಇದಕ್ಕೆ ನಾವು ನೀವು ಸಾಯಬೇಕೇನ್ರಿ ಎಂದು ಪ್ರಶ್ನಿಸಿದರಲ್ಲದೇ ಸ್ವಾಮೀಜಿಗಳು ಇಂತಹವರನ್ನು ಗೆಲ್ಲಿಸಬೇಡಿ. ಬೇರೆಯವರನ್ನು ಗೆಲ್ಲಿಸಿ ಎನ್ನಬೇಕೆಂದು ಮನವಿ ಮಾಡಿದರು. ಈ ವೇಳೆ ಸಿರಿಗೆರೆ ತರಳಬಾಳು ಗುರುಪೀಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಶ್ರೀ ಮೌನಕ್ಕೆ ಜಾರಿದರು. ಇದನ್ನೂ ಓದಿ: ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ಹೆದ್ದಾರಿ ಪ್ರಾಧಿಕಾರ ಶಾಕ್; ಬಿಡದಿ ಬಳಿಯ ಎಕ್ಸಿಟ್ ರೋಡ್ ಬಂದ್