ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

ಇಂದು ಬೆಳಗ್ಗೆ ಉಪೇಂದ್ರ ನಟಿಸಿ, ನಿರ್ದೇಶನದ ಮಾಡುತ್ತಿರುವ ಹೊಸ ಸಿನಿಮಾ ಮುಹೂರ್ತ ಬೆಂಗಳೂರಿನ ಬಂಡೆಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಈ ಸಮಾರಂಭಕ್ಕೆ ನಟ ಉಪೇಂದ್ರ, ನಿರ್ಮಾಪಕರಾದ ಜಿ.ಮನೋಹರನ್ ಮತ್ತು ಕೆ.ಪಿ. ಶ್ರೀಕಾಂತ್, ಲಹರಿ ವೇಲು ಮತ್ತು ಸಹ ನಿರ್ಮಾಪಕರಾದ ನವೀನ್ ಮನೋಹರನ್ ಸೇರಿದಂತೆ ಸಿನಿಮಾದ ತಂಡದ ಬಹುತೇಕರು ತಮ್ಮ ಸಿನಿಮಾದ ಟೈಟಲ್ ಅನ್ನು ಹಣೆ ಮೇಲೆ ಹಾಕಿಕೊಂಡು ಆಗಮಿಸಿದ್ದರು.

ಬೆಳಗ್ಗೆ ಎಂಟು ಗಂಟೆಗೆ ಸ್ಪೆಷಲ್ ಗೆಟಪ್ ನಲ್ಲಿ ಉಪೇಂದ್ರ ಮತ್ತು ಟೀಮ್ ಎಂಟ್ರಿ ಕೊಟ್ಟು ಕುತೂಹಲಕ್ಕೆ ಕಾರಣವಾದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಮುಂದೆ ಉಪ್ಪಿ ಅಭಿಮಾನಿಗಳು ಸೇರಿಕೊಂಡು, ಅವರು ಕೂಡ ತಮ್ಮ ನೆಚ್ಚಿನ ನಟನ ಸಿನಿಮಾ ಟೈಟಲ್ ಅನ್ನು ಹಣೆ ಮೇಲೆ ಹಾಕಿಕೊಂಡು ಉಪೇಂದ್ರ ಅವರಿಗೆ ಜೈಕಾರ ಹಾಕುತ್ತಿದ್ದರು. ಇದನ್ನೂ ಓದಿ :  ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್

ಈ ಚಿತ್ರಕ್ಕೆ ವಿಚಿತ್ರ ರೀತಿಯಲ್ಲಿ ಟೈಟಲ್ ಇಟ್ಟಿದ್ದಾರೆ ಉಪೇಂದ್ರ. ಅದನ್ನು ಧಾರ್ಮಿಕ ಚಿಹ್ನೆ (ನಾಮ) ಎಂದಾದರೂ, ಕರೆಯಬಹುದು ‘ಯು’ ಮತ್ತು ‘ಐ’ ಎಂದಾದರು ಅಂದುಕೊಳ್ಳಬಹುದು. ನೀನು ಮತ್ತು ನಾನು ಅಂತಾದರೂ ಊಹಿಸಿಕೊಳ್ಳಬಹುದು. ಈ ಚಿತ್ರಕ್ಕೆ ಏನೆಂದು ಕರೆಯಬಹುದು ಎನ್ನುವುದಕ್ಕೆ ಪ್ರೇಕ್ಷಕರಿಗೆ ಬಿಟ್ಟು ತಮ್ಮ ಪಾಡಿಗೆ ತಾವು ಇಂದು ಚಿತ್ರಕ್ಕೆ ಮುಹೂರ್ತ ಮಾಡಿದ್ದಾರೆ ನಿರ್ದೇಶಕರು.  ಇದನ್ನೂ ಓದಿ : ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

ಈ ಸಮಾರಂಭಕ್ಕೆ ಹಿರಿಯ ನಟ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಅತಿಥಿಗಳಾಗಿ ಆಗಮಿಸಿದ್ದರು. ನೆಚ್ಚಿನ ನಟ ಉಪೇಂದ್ರ ಅವರ ಬಗ್ಗೆ ಅತಿಥಿಗಳೆಲ್ಲ ಮಾತನಾಡಿದರು.

Comments

Leave a Reply

Your email address will not be published. Required fields are marked *