ಹುಡುಗಿಯನ್ನ ತಬ್ಬಿಕೊಂಡಾಗ ಹೇಗಾಯ್ತು ಎಂಬುದನ್ನು ಗಣೇಶ್ ಹೀಗೆ ಹೇಳ್ತಾರೆ ನೋಡಿ

ಬೆಂಗಳೂರು: ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ `ಮುಗುಳು ನಗೆ’ಯ ಟ್ರೇಲರ್ ಬಿಡುಗಡೆಗೊಂಡಿದ್ದು, ನೋಡುಗರನ್ನು ಮತ್ತೊಮ್ಮೆ ಮುಂಗಾರು ಮಳೆಯ ಲೋಕಕ್ಕೆ ಕರೆದುಕೊಂಡು ಹೋಗುವ ಪಥವನ್ನು ತೋರಿಸುತ್ತಿದೆ.

ಹೌದು. ಡೈಲಾಗ್ ಗಳಿಂದಲೇ ಗೆದ್ದ ಮುಂಗಾರುಮಳೆ ಸಿನಿಮಾದಲ್ಲಿ ಈ ಚಿತ್ರದಲ್ಲೂ ಡೈಲಾಗ್ ಗಳಿಗೆ ಕೊರತೆ ಇಲ್ಲ ಎನ್ನುವಂತೆ ಟ್ರೇಲರ್ ಮೂಡಿಬಂದಿದೆ. “ತಬ್ಕೊಂಡಾಗ ಬಿಟ್ಟಾಂಗಾಯ್ತು..ಬಿಟ್ಟಾಗ ತಬ್ಕೊಂಡಗಾಯ್ತು..ಸೂರ್ಯ ತಂಪ ತಂಪಗೆ ಕಾಣಿಸ್ತಾಯಿದ್ದಾ.. ಚಂದ್ರ ಹೀಟ್ ಆದಹಾಗೆ ಕಾಣಿಸ್ತು.. ಒಂದು ದೊಡ್ಡ ಕಥೆ, ಇನ್ನೊಂದು ಪುಟ್ಟ ಕಥೆ…” ಎನ್ನುವ ಡೈಲಾಗ್ ಮುಗುಳುನಗೆಯಲ್ಲಿದೆ.

ಸಿನಿಮಾದಲ್ಲಿ ಗಣೇಶ್‍ಗೆ ನಾಯಕಿಯರಾಗಿ ಅಮೂಲ್ಯ, ಆಶಿಕಾ, ಅಪೂರ್ವ ಅರೋರಾ ಮತ್ತು ನಿಖಿತಾ ನಾರಾಯಣ್ ಕಾಣಿಸಿಕೊಂಡಿದ್ದು, ಭಾವನಾ ವಿಶೇಷ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದಶಕಗಳ ಹಿಂದೆ ಮುಂಗಾರು ಮಳೆ ಮತ್ತು ಗಾಳಿಪಟ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಗಣೇಶ್-ಯೋಗರಾಜ್ ಭಟ್ ಜೋಡಿ ಒಂದಾಗಿದ್ದು, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.

ಚಿತ್ರ ಯುವ ಮನಸ್ಸುಗಳ ನಡುವಿನ ಪ್ರೀತಿ-ಪ್ರೇಮದ ಕಥಾ ಹಂದರವನ್ನು ಒಳಗೊಂಡಿದ್ದು, ಯುವ ಮನಸ್ಸುಗಳ ಪ್ರೇಮ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಕಾಲೇಜನಲ್ಲಿ ಉಂಟಾಗುವ ಪ್ರೀತಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಬದಲಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

ಮುಗುಳು ನಗೆ ಚಿತ್ರವನ್ನು ಎಸ್.ಎಸ್.ಫಿಲಂಸ್, ಗೋಲ್ಡನ್ ಮೂವೀಸ್ ಮತ್ತು ಯೋಗರಾಜ್ ಸಿನಿಮಾಸ್ ಬ್ಯಾನರ್‍ಗಳಲ್ಲಿ ನಿರ್ಮಾಣವಾಗಿದ್ದು, ಸೈಯದ್ ಸಲಾಂ ಚಿತ್ರವನ್ನು ನಿರ್ಮಿಸಿದ್ದಾರೆ. ಮುಗುಳು ನಗೆಯ ಹಾಡುಗಳು ಈಗಾಗಲೇ ಜನರ ಮೆಚ್ಚುಗೆಯನ್ನು ಪಡೆದುಕೊಂಡಿವೆ.

https://www.youtube.com/watch?v=x1cHJWz8M6U

Comments

Leave a Reply

Your email address will not be published. Required fields are marked *