ಮರ್ಯಾದೆಯಿಂದ ವಾಪಸ್ ಹೋಗೋ ಲೇ – ಇನ್ಸ್‌ಪೆಕ್ಟರ್‌ಗೆ ಎಂ.ಪಿ.ಕುಮಾರಸ್ವಾಮಿ ಆವಾಜ್

MLA AND PSI

ಚಿಕ್ಕಮಗಳೂರು: ಆಗಾಗ್ಗೆ ತನ್ನ ದರ್ಪ ತೋರಿಸುತ್ತಾ ವಿವಾದಕ್ಕೆ ಗುರಿಯಾಗುತ್ತಿರುವ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರಿಗೆ ಫೋನ್ ನಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಗೆ ಹೊಸದಾಗಿ ಚಾರ್ಜ್ ತೆಗೆದುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ರವೀಶ್‌ಗೆ ಆವಾಜ್ ಹಾಕಿದ್ದು, ಏಕವಚನದಲ್ಲೇ ಅಸಾಂವಿಧಾನಿಕ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಪತಿ ಕಣ್ಣೆದುರೇ ಪ್ರಿಯಕರನೊಂದಿಗೆ ಪತ್ನಿ ಸೆಕ್ಸ್ – ಸ್ಕ್ರೂಡ್ರೈವರ್‌ನಿಂದ ಇಬ್ಬರನ್ನು ಇರಿದು ಕೊಂದ

MUDIGERE PSI MLA 2

ಯಾರನ್ನ ಕೇಳಿ ಚಾರ್ಜ್ ತೆಗೆದುಕೊಂಡೆ, ಎಲ್ಲಿದ್ದೀಯಾ? ನಿನಿಗೆ ಬರ್ಬೇಡಾ ಅಂತ ಹೇಳಿದ್ದೆ ತಾನೆ? ನೀನು ವಾಪಸ್ ಹೋಗು, ಠಾಣೆಯಲ್ಲಿ ಇರಬೇಡ, ಮರ್ಯಾದೆಯಿಂದ ವಾಪಸ್ ಹೋಗೋ ಲೇ, ನಾನು ಹೇಳಿದ ಹಾಗೆ ಕೇಳು, ಬೇಕಾದ್ರೆ ರೆಕಾರ್ಡ್ ಮಾಡ್ಕೊ, ನಾಳೆನೇ ನಿನ್ನ ಎತ್ತಂಗಡಿ ಮಾಡಿಸ್ತೇನೆ ಎಂದು ಗದರಿದ್ದಾರೆ.

ಮುಂದುವರಿದು ಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ? ಯಾವನು ಐಜಿ? ಮೂಡಿಗೆರೆಗೆ ನಾನೇ ಎಲ್ಲ, ನನ್ನನ್ನು ನೋಡಲು ಬಂದ್ರೆ ಒದ್ದು ಓಡಿಸುತ್ತೇನೆ ಎಂದು ಇನ್ಸ್ಪೆಕ್ಟರ್‌ನನ್ನು ಅಲ್ಲಗಳೆದಿದ್ದಾರೆ.  ಇದನ್ನೂ ಓದಿ: ಖಾವಿ ಬಟ್ಟೆತೊಟ್ಟು ಗುತ್ತಿಗೆದಾರನಿಂದ ಲಕ್ಷ-ಲಕ್ಷ ಕಿತ್ತ ಸ್ವಾಮೀಜಿಗಳು: ಪ್ರಕರಣ ದಾಖಲು

ಈ ವಿಚಾರದ ಅಭಿಪ್ರಾಯ ಕೇಳಲು ಶಾಸಕರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದೆ. ಈ ವೇಳೆ, ಸರ್ಕಾರ ನಮ್ಮದು ನಾವು ಹೇಳಿದಂಗೆನೇ ನಡೆಯಬೇಕು ಎಂದು ಉದ್ಧಟತನ ಮೆರೆದಿದ್ದಾರೆ.

MUDIGERE PSI MLA

ಹೀಗಿತ್ತು ಶಾಸಕ-ಇನ್ಸ್‌ಪೆಕ್ಟರ್‌ ನಡುವಿನ ಸಂಭಾಷಣೆ:
ಶಾಸಕ : ಹಲೋ ಯಾರಪ್ಪಾ ಇದು ನಂಬರು
ಪಿಎಸ್‌ಐ : ಸರ್, ನಾನು ರವೀಶ್ ಮಾತಾಡೋದು ಸಾರ್

ಶಾಸಕ : ಈಗ ಎಲ್ಲಿದ್ದೀಯಾ…
ಪಿಎಸ್‌ಐ : ಸ್ಟೇಷನ್ ನಲ್ಲಿ ಇದೀನಿ ಸರ್…

ಶಾಸಕ : ಇಲ್ಲಿಗೆ ಬರ್ಬೇಡ ಅಂದಿದ್ನಲ್ಲ ನಾನು.
ಪಿಎಸ್‌ಐ : ಐಜಿ ಸರ್ ಫೋನ್ ಮಾಡಿ ಹೇಳಿದ್ರು ಸರ್, ಚಾರ್ಜ್ ತಗೋಳಿ ಹೋಗಿ ಅಂತ.

ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು… ಸ್ಟೇಷನ್ ನಲ್ಲಿ ಇರಬೇಡ… ಮರ್ಯಾದೆಯಿಂದ ವಾಪಸ್ ಹೋಗಲೇ, ನಾನು ಹೇಳಿದಂತೆ ಕೇಳು, ರೆಕಾರ್ಡ್ ಮಾಡಿಕೋ ಬೇಕಾದ್ರೆ.
ಪಿಎಸ್‌ಐ : ಸರ್ ಹಾಗೇನಿಲ್ಲ ಸರ್, ಅಲ್ಲಿಗೆ ನಿಮ್ಮ ಬಳಿ ಬರ್ತೇನೆ ಸರ್, ನಾಳೆ ಬಂದ್ ನಿಮ್ಮನ್ನಾ ಕಾಣ್ತೀನಿ ಸರ್.

MUDIGERE PSI MLA 3

ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು, ಬಂದ ದಾರಿಯಲ್ಲೇ ವಾಪಸ್ ಹೋಗು, ನಾಳೆಯೇ ಚೇಂಜ್ ಮಾಡಿಸ್ತೀನಿ ನೋಡು, ನಿಮ್ಮದು ನಡಿಯಲ್ಲ, ಎಷ್ಟು ಲಂಚ ಕೊಟ್ಟಿದ್ದೀಯಾ, ಐಜಿಗೆ – ಯಾರಿಗೆ ಎಷ್ಟು ಕೊಟ್ಡೀದ್ದೀಯಾ, ನನಗೆ ಗೊತ್ತಿಲ್ವಾ.
ಪಿಎಸ್‌ಐ : ಸರ್ ಆ ರೀತಿ ಏನಿಲ್ಲ ಸರ್ ನಾನೇನು ಕೊಟ್ಟಿಲ್ಲ ಸರ್ ಇದನ್ನೂ ಓದಿ: 70 ವಯಸ್ಸಿನ ಬುದ್ಧಿಮಾಂದ್ಯ ವೃದ್ಧೆಯನ್ನು ಅಪಹರಿಸಿ ಅತ್ಯಾಚಾರ

ಶಾಸಕ : ಮರ್ಯಾದೆಯಿಂದ ಹೊರಟು ಹೋಗು, ಬಂದ ದಾರಿಯಲ್ಲಿ ಹೋಗು.
ಪಿಎಸ್‌ಐ : ನಾಳೆ ಬಂದು ನಿಮ್ಮನ್ನ ಭೇಟಿ ಮಾಡ್ತೀನಿ ಸರ್.

ಶಾಸಕ : ಯಾವನ್ ಐಜಿ, ಐಜಿ ಅಲ್ಲ, ಮೂಡಿಗೆರೆಗೆ ಎಲ್ಲ ನಾನೇ, ಅವನಿಗೆ ಹೇಳು ಐಜಿಗೆ.
ಪಿಎಸ್‌ಐ : ನಾಳೆ ಬಂದು ನಿಮ್ಮನ್ನ ಭೇಟಿ ಆಗುತ್ತೇನೆ ಸರ್. ಇದನ್ನೂ ಓದಿ: ದೂರು ನೀಡಿದ್ದಕ್ಕೆ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್- ಮೂವರು ಅರೆಸ್ಟ್

ಪಿಎಸ್‌ಐ : ಸರ್ ನಾಳೆ ಬಂದು ನಿಮ್ಮನ್ನ ಕಾಣ್ತೀನಿ ಸರ್.
ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು, ಬಂದ ದಾರಿಯಲ್ಲೇ ಹೋಗು. ಒದ್ದು ಓಡಿಸುತ್ತೇನೆ ಬಂದ್ರೆ.

Comments

Leave a Reply

Your email address will not be published. Required fields are marked *