ಹೈಕಮಾಂಡ್‌ಗೆ ಸೆಡ್ಡು – ಮುದ್ದಹನುಮೇಗೌಡ ಪರ ಪ್ರಚಾರ ಆರಂಭಿಸಿದ ರಾಜಣ್ಣ

ತುಮಕೂರು: ಕಾಂಗ್ರೆಸ್‌ ಹೈಕಮಾಂಡ್‌ಗೆ ಸಹಕಾರ ಸಚಿವ ಕೆಎನ್‌ ರಾಜಣ್ಣ (KN Rajanna) ಸೆಡ್ಡು ಹೊಡೆದಿದ್ದು ಮುದ್ದಹನುಮೇಗೌಡ (Muddahanumegowda) ಅವರನ್ನು ತುಮಕೂರು (Tumakuru) ಕ್ಷೇತ್ರದ ಕಾಂಗ್ರೆಸ್‌ (Congress) ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.

ಮಧುಗಿರಿ ತಾಲೂಕಿನ ಗುಟ್ಟೇ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಣ್ಣ ಅವರು ಮಾಜಿ ಸಂಸದ ಮುದ್ದಹನುಮೇಗೌಡ ಪರ ಪ್ರಚಾರ ಆರಂಭಿಸಿದ್ದಾರೆ.  ಇದನ್ನೂ ಓದಿ: ವಿಜಯೇಂದ್ರ‌ ಮುಂದಿನ‌ ಮುಖ್ಯಮಂತ್ರಿ ಎಂದ ಶಾಸಕ ಶಿವರಾಜ್ ಪಾಟೀಲ್

ಇವತ್ತಿನ ತೀರ್ಮಾನದಲ್ಲಿ ಮೇಲ್ನೋಟಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಅವಕಾಶ ಇದೆ. ಹಾಗಾಗಿ ಈಗಲೇ ಹೇಳುತ್ತಿದ್ದೇನೆ. ಮತ್ತೆ ನಾನೇನು ಹೇಳಲಿಲ್ಲ ಎಂದು ಹೇಳಬಾರದು. ಟಿಕೆಟ್‌ ನೀಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಇಂಥದ್ದೇ ಡ್ರೆಸ್‌ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್‌ ಕೋಡ್‌ಗೆ ಸಿಎಂ ವಿರೋಧ

ನಾನು ನೇರವಾಗಿ ಲೋಕಸಭೆ ಚುನಾವಣೆಗೆ ಮತ ಕೇಳಲು ಬರುತ್ತೇನೆ. ಕಾಂಗ್ರೆಸ್‌ಗೆ ವೋಟು ಹಾಕಬೇಕು. ಇವತ್ತಿನ ದಿನಮಾನದಲ್ಲಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಹೈಕಮಾಂಡ್ ಕೂಡ ಸೂಕ್ಷ್ಮವಾಗಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಮುದ್ದಹನುಮೇಗೌಡ ಬಿಟ್ಟು ಬೇರೆ ಯಾರಿಗಾದರೂ  ಟಿಕೆಟ್‌ ಸಿಗಲಿ 100ಕ್ಕೆ 99 ರಷ್ಟು ಭಾಗ ಕಾಂಗ್ರೆಸ್‌ಗೆ ವೋಟ್‌ ಹಾಕಬೇಕು ಎಂದರು.