MUDA Scam: ಮೈಸೂರು ಮುಡಾ ಕಚೇರಿ ಮೇಲೆ ಇ.ಡಿ ದಾಳಿ

– ತಹಸೀಲ್ದಾರ್‌ ಕಚೇರಿಯಲ್ಲೂ ED ಅಧಿಕಾರಿಗಳಿಂದ ಪರಿಶೀಲನೆ

ಮೈಸೂರು: ಮುಡಾ ಸೈಟ್‌ (MUDA Scam Case) ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ (ED) ಅಧಿಕಾರಿಗಳು ಶುಕ್ರವಾರ ಮುಡಾ ಕಚೇರಿ ಹಾಗೂ ತಹಸೀಲ್ದಾರ್‌ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರು ಆಧರಿಸಿ ಈ ದಾಳಿ ನಡೆಸಲಾಗಿದೆ. ಬೆಳಗ್ಗೆ 11:30 ಕ್ಕೆ ದಾಳಿ ಇ.ಡಿ ದಾಳಿ ನಡೆಸಿದೆ. ಮುಡಾ ಅಧಿಕಾರಿಗೆ ಸಮನ್ಸ್ ನೀಡಿದ್ರೂ ದಾಖಲೆ ಕೊಡದ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ.

ಕೆಂಗೇರಿಯಲ್ಲಿರುವ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಮನೆಯ ಮೇಲೂ ಇ.ಡಿ ದಾಳಿ ನಡೆಸಿದೆ. ಮೈಸೂರು ತಹಸೀಲ್ದಾರ್ ಕಚೇರಿಗೆ ನಾಲ್ಕು ಜನ ಇಡಿ ಅಧಿಕಾರಿಗಳು ತೆರಳಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೈಸೂರು ತಾಲೂಕು ವ್ಯಾಪ್ತಿಯಲ್ಲಿನ ಭೂಮಿ ಮಂಜೂರಾದ ಬಗ್ಗೆ ದಾಖಲೆ ಪಡೆದುಕೊಳ್ಳಲು ಹೋಗಿದ್ದಾರೆ.