ಮುಡಾ ಹಗರಣ – ಇಂದು ಸಿಎಂ ಸಿದ್ದರಾಮಯ್ಯಗೆ ನಿರ್ಣಾಯಕ ದಿನ

– ಬಿ ರಿಪೋರ್ಟ್ ವಿರೋಧಿಸಿ ಇ.ಡಿ ವಾದ

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaih) ಅವರಿಗೆ ಇಂದು ಮಹತ್ವದ ದಿನ. ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್‌ಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ನೀಡಲಿದೆ.

ಸುಮಾರು ನಾಲ್ಕು ತಿಂಗಳುಗಳ ಕಾಲ ತನಿಖೆ ನಡೆಸಿದ ಲೋಕಾಯುಕ್ತ ಸಿಎಂ ಮತ್ತು ಸಿಎಂ ಪತ್ನಿ ಸೇರಿದಂತೆ ನಾಲ್ವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಅಂತಿಮ ವರದಿ ಸಲ್ಲಿಸಿತ್ತು. ಆದರೆ ಅಂತಿಮ ವರದಿ ಪ್ರಶ್ನಿಸಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅಂತಿಮ ವರದಿಯಲ್ಲಿ ಇರುವ ಲೋಪದೋಷಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ಇಂದು ಆದೇಶ ನೀಡಲಿದೆ. ಇದನ್ನೂ ಓದಿ: ಇಂದು ಪಿಯುಸಿ ಫಲಿತಾಂಶ ಪ್ರಕಟ – ಯಾವ ವೆಬ್‌ಸೈಟ್‌ನಲ್ಲಿ ನೋಡಬಹುದು? ಚೆಕ್‌ ಮಾಡೋದು ಹೇಗೆ?

ಆದರೆ ಸ್ನೇಹಮಯಿ ಕೃಷ್ಣ ಅವರ ಜೊತೆಗೆ ಇ.ಡಿ ಅಧಿಕಾರಿಗಳು ಬಿ ರಿಪೋರ್ಟ್ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇ.ಡಿಯ ತಕರಾರು ಅರ್ಜಿ ಮಾನ್ಯತೆಯ ವಾದ-ಪ್ರತಿವಾದ ನಡೆಯಲಿದೆ. ಈ ನಡುವೆ ಬಿ ರಿಪೋರ್ಟ್ ಅನ್ನು ನ್ಯಾಯಾಲಯ ಒಪ್ಪುತ್ತಾ ಅಥವಾ ಮರು ತನಿಖೆಗೆ ಆದೇಶ ನೀಡುತ್ತಾ ಎಂದು ಕಾದುನೋಡಬೇಕಿದೆ.  ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳ ವಿಚಾರಣೆ