ಹಾರ್ದಿಕ್ ಪಾಂಡ್ಯಗೆ ಸಿಕ್ಕ ಹೊಸ `ಚಿಯರ್ ಲೀಡರ್’ – ವಿಡಿಯೋ ನೋಡಿ

ಡಬ್ಲಿನ್ : ಐರ್ಲೆಂಡ್ ವಿರುದ್ಧ ಎರಡನೇ ಕೊನೆಯ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸ್ಫೋಟಕ ಪ್ರದರ್ಶನ ನೀಡಿದ್ದು, ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಪುತ್ರಿ ಜೀವಾ, ಪಾಂಡ್ಯ ಗೆ ಚಿಯರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೀವಾ ಚಿಯರ್ ಮಾಡಿರುವ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ತನಗೆ ಹೊಸ `ಚಿಯರ್ ಲೀಡರ್’ ಸಿಕ್ಕಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

ಐರ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 18 ಓವರ್ ನಲ್ಲಿ ಕಣಕ್ಕೆ ಇಳಿದ ಹಾರ್ದಿಕ್ ಪಾಂಡ್ಯ ಕೇವಲ 9 ಎಸೆತಗಳಲ್ಲಿ 32 ರನ್ ಸಿಡಿಸಿ ಮಿಂಚು ಹರಿಸಿದ್ದರು. ಇದರಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹ ಒಳಗೊಂಡಿದ್ದು, ತಂಡದ ಮೊತ್ತ 200 ರನ್ ಗಡಿ ದಾಟಲು ನೆರವಾಗಿತ್ತು.

https://www.instagram.com/p/BknuIqeBtcI/?utm_source=ig_embed

ಇದಕ್ಕೂ ಮುನ್ನ ಆರಂಭಿಕನಾಗಿ ಕಣಕ್ಕೆ ಇಳಿದ ಕನ್ನಡಿಗ ಕೆಎಲ್ ರಾಹುಲ್ ಸಹ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದು, 70 ರನ್(36 ಎಸೆತ, 3 ಬೌಂಡರಿ, 6 ಸಿಕ್ಸರ್) ನೆರವಿನಿಂದ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಉಳಿದಂತೆ ಅಂಬಟಿ ರಾಯುಡು ಸ್ಥಾನದಲ್ಲಿ ಸರಣಿಗೆ ಆಯ್ಕೆ ಆಗಿದ್ದ ರೈನಾ ಕೂಡ 69 ರನ್ (45 ಎಸೆತ, 5 ಬೌಂಡರಿ, 3 ಸಿಕ್ಸರ್)ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ ಭಾರತದ 213 ರನ್ ಬೃಹತ್ ಬೆನ್ನತ್ತಿದ್ದ ಐರ್ಲೆಂಡ್ ತಂಡ ಯಜುವೇಂದ್ರ ಚಹಲ್, ಕುಲ್ ದೀಪ್ ಸ್ಪೀನ್ ದಾಳಿಗೆ ನಲುಗಿ 70 ರನ್ ಗಳಿಸಿ ಸೋಲುಂಡಿತ್ತು. ಚಹಲ್ ಮತ್ತು ಕುಲ್‍ದೀಪ್ ತಲಾ 3 ವಿಕೆಟ್ ಪಡೆದರು.

ಸದ್ಯ ಐರ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದು ಕೊಂಡಿರುವ ಕೊಹ್ಲಿ ಬಳಕ ಇಂಗ್ಲೆಂಡ್ ವಿರುದ್ಧದ ತಲಾ ಮೂರು ಪಂದ್ಯಗಳ ಟಿ20, ಏಕದಿನ ಹಾಗೂ ಐದು ಪಂದ್ಯಗಳ ಟೆಸ್ಟ್ ಆಡಲಿದೆ.

https://twitter.com/sidkaul22/status/1012771396693516289?

Comments

Leave a Reply

Your email address will not be published. Required fields are marked *