2011ರ ವಿಶ್ವಕಪ್ ಗೆಲುವಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಧೋನಿ

ಮುಂಬೈ: 2011ರ ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದಎಂಎಸ್ ಧೋನಿ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿ ಕಣಕ್ಕೆ ಇಳಿದಿದ್ದು ಪ್ರತಿಯೊಬ್ಬ ಅಭಿಮಾನಿಗೆ ತಿಳಿದಿರುವ ಸಂಗತಿ. ಆದರೆ ಅಂದಿನ ಶ್ರೀಲಂಕಾ ತಂಡದ ವಿರುದ್ಧದ ಪಂದ್ಯದ ಗೆಲುವಿಗೆ ಮತ್ತೊಂದು ಪ್ರಮುಖ ಕಾರಣದ ಬಗ್ಗೆ ಎಂಎಸ್ ಧೋನಿ ತಿಳಿಸಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಂದು ಭಾರತ 275 ರನ್ ಗಳ ಗುರಿಹೊಂದಿತ್ತು. ಆದರೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಬೇಗ ಔಟಾದರು. ಈ ವೇಳೆ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಜೋಡಿಯಾಗಿ 83 ರನ್ ಗಳ ಕೊಡುಗೆ ನೀಡಿದ್ದರು. ಆದರೆ 22ನೇ ಓವರ್ ಬಳಿಕ ಶ್ರೀಲಂಕಾ ತಂಡ ಮೇಲುಗೈ ಸಾಧಿಸುವ ಸೂಚನೆ ಸಿಕ್ಕಿತ್ತು. ಅದ್ದರಿಂದ ವಿರಾಟ್ ಕೊಹ್ಲಿ ಔಟಾಗುತ್ತಿದಂತೆ ಧೋನಿ ಬ್ಯಾಟಿಂಗ್ ಇಳಿದಿದ್ದರು.

ಭಾರತ 48.2 ಓವರ್ ಗಳಲ್ಲಿ ಧೋನಿ, ಗಂಭೀರ್ ಅವರ ಉತ್ತಮ ಆಟದಿಂದಾಗಿ ಜಯಗಳಿಸಿತ್ತು. ಧೋನಿ ಸಿಕ್ಸರ್ ಸಿಡಿಸಿ ಗೆಲುವು ತಂದಿದ್ದರು. ಈ ಕುರಿತು ಮಾತನಾಡಿರುವ ಧೋನಿ, ಶ್ರೀಲಂಕಾ ಆಟಗಾರರಾದ ಮುತ್ತಯ್ಯ ಮುರಳೀಧರನ್ ಹಾಗೂ ನುವಾನ್ ಕುಲಶೇಖರ್ ರಂತಹ ಆಟಗಾರರೊಂದಿಗೆ ಐಪಿಎಲ್‍ನಲ್ಲಿ ಆಡಿದ್ದ ಅನುಭವ ನನಗೆ ಸಹಕಾರಿ ಆಯಿತು. ಆ ಸಂದರ್ಭದಲ್ಲಿ ಮುರಳೀಧರನ್ ಬೌಲಿಂಗ್ ಮಾಡುತ್ತಿದ್ದರು. ಚೆನ್ನೈ ಪರ ಆಡುತ್ತಿದ್ದ ವೇಳೆ ಅವರೊಂದಿಗೆ ಸಾಕಷ್ಟು ಸಮಯ ಆಡಿದ್ದೆ. ಅದ್ದರಿಂದಲೇ ಸುಲಭವಾಗಿ ರನ್‍ಗಳಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಪಂದ್ಯದಲ್ಲಿ ಗೌತಮ್ ಗಂಭೀರ್ 3 ರನ್ ಗಳಿಂದ ಶತಕ ವಂಚಿತರಾದರು. ಆದರೆ ಧೋನಿ ಪಂದ್ಯದ ಅಂತಿಮ ಕ್ಷಣದವರೆಗೂ ಬ್ಯಾಟಿಂಗ್ ನಡೆಸಿ ಗೆಲುವಿಗೆ ಕಾರಣರಾಗಿದ್ದರು. ಧೋನಿ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿದ ಬಳಿಕವೂ ಕೊಹ್ಲಿಗೆ ಸಾಕಷ್ಟು ಬಾರಿ ಸಲಹೆ ನೀಡುತ್ತಾ ತಂಡ ಗೆಲುವಿಗೆ ಕಾರಣರಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *