ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

ವೆಲಿಂಗ್ಟನ್: ಟೀಂ ಇಂಡಿಯಾ ಮಾಜಿ ನಾಯಕ 37 ವರ್ಷದ ಧೋನಿ ವಿಕೆಟ್ ಹಿಂದಿನ ತಮ್ಮ ಅನುಭವದ ಕೌಶಲ್ಯಗಳನ್ನು ಮತ್ತೆ ಸಾಬೀತುಪಡಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ ಸ್ಮಾರ್ಟ್ ರನೌಟ್ ಮಾಡಿ ಪ್ರಶಂಸೆ ಪಡೆದಿದ್ದಾರೆ.

ಪಂದ್ಯದ 37 ಓವರ್ ನಲ್ಲಿ ಸ್ಟ್ರೈಕ್ ನಲ್ಲಿದ್ದ ನೀಶಮ್ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಲು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರು. ಆದರೆ ಕೇದಾರ್ ಜಾಧವ್ ತಮ್ಮ ಬೌಲಿಂಗ್ ನಲ್ಲಿ ಎಲ್‍ಬಿಡಬ್ಲೂ ಗೆ ಅಂಪೈರ್ ಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಮಯ ಪ್ರಜ್ಞೆ ತೋರಿದ ಧೋನಿ ಮಿಂಚಿನ ವೇಗದಲ್ಲಿ ಬಾಲ್ ಪಡೆದು ಬ್ಯಾಟ್ಸ್ ಮನ್ ಕ್ರಿಸ್‍ಗೆ ಬರುವ ಮುನ್ನವೇ ಬೆಲ್ಸ್ ಉರುಳಿಸಲು ಯಶಸ್ವಿಯಾಗಿದರು. ಇದನ್ನು ಕಂಡ ಕ್ಷಣ ಕಾಲ ದಂಗಾದ ನೀಶಮ್ ನಿರಾಸೆಯಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

ಗಾಯದ ಸಮಸ್ಯೆಯಿಂದ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಧೋನಿ, ಅಂತಿಮ ಪಂದ್ಯದ ವೇಳೆಗೆ ಚೇತರಿಸಿಕೊಂಡು ಕಣಕ್ಕೆ ಇಳಿದಿದ್ದರು. ಆದರೆ ಬ್ಯಾಟಿಂಗ್ ನಲ್ಲಿ 1 ರನ್ ಗಳಿಸಿ ಔಟಾಗುವ ಮೂಲಕ ಧೋನಿ ನಿರಾಸೆ ಮೂಡಿಸಿದರೂ ಕೂಡ ವಿಕೆಟ್ ಹಿಂದೆ ನಿಂತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಧೋನಿ ತಮ್ಮ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಾತ್ರ ಗಮನ ಸೆಳೆಯದೆ, ತಂಡದ ಬೌಲರ್ ಗಳಿಗೆ ಸೂಕ್ತ ಸಲಹೆ ನೀಡುವ ಮೂಲಕ ಸ್ಪಿನ್ನರ್ ಗಳ ಯಶಸ್ವಿಗೆ ಕಾರಣರಾಗಿದ್ದಾರೆ. ರವೀಂದ್ರ ಜಡೇಜಾ, ಕೇದಾರ್ ಜಾಧವ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್‍ರ ಯಶಸ್ಸಿನ ಹಿಂದೆ ಧೋನಿ ನೀಡಿದ ಸಲಹೆಗಳು ಮುಖ್ಯವಾಗಿದೆ. 2018 ಇಂಗ್ಲೆಂಡ್ ಸರಣಿಯಲ್ಲೂ ಧೋನಿ ಪ್ರಮುಖರಾಗಿದ್ದರು, ಏಕೆಂದರೆ ಈ ಸರಣಿಯ 6 ಪಂದ್ಯಗಳಲ್ಲಿ ಚಹಲ್, ಕುಲ್ದೀಪ್ 33 ವಿಕೆಟ್ ಪಡೆದಿದ್ದರು. ಪ್ರತಿ ಸಂದರ್ಭದಲ್ಲೂ ಧೋನಿ ನೀಡಿದ ಸಲಹೆ ಬಗ್ಗೆ ಬೌಲರ್ ಗಳು ಪ್ರಶಂಸೆ ವ್ಯಕ್ತಡಿಸುವಂತೆ ಬೌಲ್ ಮಾಡಿ ವಿಕೆಟ್ ಪಡೆಯುತ್ತಿದ್ದರು. ನ್ಯೂಜಿಲೆಂಡ್ ಸರಣಿಯಲ್ಲೂ ಧೋನಿ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿತ್ತು.

https://twitter.com/DoctorrSays/status/1091984081695367169

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *