ನಾನು ಓದುತ್ತಿರೋ ವಿಶ್ವವಿದ್ಯಾಲಯದಲ್ಲಿ ಧೋನಿ ಟಾಪರ್: ಕಾರ್ತಿಕ್

ಚೆನ್ನೈ: ನಾನು ಓದುತ್ತಿರುವ ವಿಶ್ವವಿದ್ಯಾಲಯದಲ್ಲಿ ಧೋನಿ ಟಾಪರ್ ಆಗಿದ್ದರೆ, ನಾನು ಇನ್ನೂ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದೇನೆ ಎಂದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಬಾಂಗ್ಲಾ ವಿರುದ್ಧ ನಿದಾಸ್ ಟ್ರೋಫಿ ಟಿ 20 ಫೈನಲ್ ಪಂದ್ಯವನ್ನು ಜಯಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನನ್ನ ಆಟವನ್ನು ಧೋನಿಗೆ ಹೋಲಿಸುವುದು ಸರಿಯಲ್ಲ ಎಂದರು.

ಪಂದ್ಯದ ಫಿನಿಶಿಂಗ್ ವಿಚಾರಕ್ಕೆ ಬಂದರೆ ಧೋನಿ ನಂತರದ ಸ್ಥಾನವನ್ನು ತುಂಬಬಲ್ಲ ಆಟಗಾರ ಎನ್ನುವ ಮಾತು ಭಾನುವಾರದ ಪಂದ್ಯದ ಬಳಿಕ ಕೇಳಿ ಬಂದಿತ್ತು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಧೋನಿ ನನಗಿಂತಲೂ ಮಾನಸಿಕವಾಗಿ ಸದೃಢರಾಗಿದ್ದಾರೆ ಎಂದು ತಿಳಿಸಿದರು.

ನನ್ನ ಕ್ರಿಕೆಟ್ ಜೀವನ ಮತ್ತು ಧೋನಿಯವರ ಕ್ರಿಕೆಟ್ ಜೀವನಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಧೋನಿ ಅವರು ಕಿರಿಯ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾರೆ. ಹೀಗಾಗಿ ಅವರ ಆಟಕ್ಕೆ ನನ್ನ ಆಟವನ್ನು ಹೋಲಿಸುವುದು ಸರಿಯಲ್ಲ ಎಂದರು. ಇದನ್ನೂ ಓದಿ: ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

ಈ ವೇಳೆ ಮುಂಬೈ ಆಟಗಾರ ಅಭಿಷೇಕ್ ನಾಯರ್ ನೀಡಿದ ಸಲಹೆಯನ್ನು ತಿಳಿಸಲು ಕಾರ್ತಿಕ್ ಮರೆಯಲಿಲ್ಲ. ಕಳೆದ ಎರಡು ವರ್ಷದಲ್ಲಿ ನನ್ನ ಆಟ ನಾಯರ್ ನೀಡಿದ ಸಲಹೆಯಿಂದ ಬದಲಾಗಿದೆ. ಅಭಿಷೇಕ್ ನಾಯರ್ ನದಿಯಾದರೆ ನಾನು ದೋಣಿ ಎಂದರು. ಇದನ್ನೂ ಓದಿ: ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

ವಿಜಯ್ ಶಂಕರ್ ಆಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೌಲರ್ ಆಗಿ ಅವರು ಉತ್ತಮ ಆಟವನ್ನು ಆಡಿದ್ದಾರೆ. ಆಲ್ ರೌಂಡರ್ ಆಗಿರುವ ಅವರು ಒತ್ತಡ ಸಮಯದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಅವರಿಗೆ ಸಹಾಯಕವಾಗಬಹುದು ಎಂದು ತಿಳಿಸಿದರು. ಇದನ್ನೂ ಓದಿ : ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

Comments

Leave a Reply

Your email address will not be published. Required fields are marked *