ಸಚಿನ್ ಅಪ್ಪಟ ಅಭಿಮಾನಿಯನ್ನು ವಿಶೇಷವಾಗಿ ಗೌರವಿಸಿದ ಕೂಲ್ ಧೋನಿ

ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಅಪಟ್ಟ ಅಭಿಮಾನಿ ಸುಧೀರ್ ಗೌತಮ್‍ರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಊಟಕ್ಕೆ ಕರೆಸಿಕೊಂಡಿದ್ದರು.

ಭಾರತದಲ್ಲಿ ಯಾವುದೇ ಸ್ಟೇಡಿಯಂನಲ್ಲಿ ಎಲ್ಲ ಪಂದ್ಯದಲ್ಲಿಯೂ ಸುಧೀರ್ ಕೈಯಲ್ಲಿ ಶಂಖ ಹಿಡಿದು ಮೈ ತುಂಬ ತ್ರಿವರ್ಣ ಪೇಟಿಂಗ್ ಹಚ್ಚಿಕೊಂಡು ರಾಷ್ಟ್ರಧ್ವಜವನ್ನು ಹಾರಿಸುತ್ತಿರುತ್ತಾರೆ. ಸುಧೀರ್ ಅಪ್ಪಟ ಸಚಿನ್ ಅಭಿಮಾನಿಯಾಗಿದ್ದು, ಈಗ ಒಂದು ಹೊಸ ವಿಷಯದಲ್ಲಿ ಸುದ್ದಿಯಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ, ಸುಧೀರ್ ಅವರನ್ನು ತಮ್ಮ ಮನೆಗೆ ಕರೆಸಿ ಔತನಕೂಟಕ್ಕೆ ಆಹ್ವಾನಿಸಿದ್ದಾರೆ. ಸುಧೀರ್ ಧೋನಿ ಅವರ ಕುಟುಂಬದ ಜೊತೆ ಊಟ ಮಾಡಿದ್ದು, ಸದ್ಯ ಆ ಫೋಟೋಗಳನ್ನು ಸುಧೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಧೋನಿ ಮನೆಯಲ್ಲಿ ಊಟ ಮಾಡುತ್ತಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿಕೊಂಡು, “ಇದು ನನಗೆ ವಿಶೇಷವಾದ ದಿನ. ಫಾರಂ ಹೌಸ್‍ನಲ್ಲಿ ಸೂಪರ್ ಕುಟುಂಬದ ಜೊತೆ ಸೂಪರ್ ಲಂಚ್. ಧನ್ಯವಾಗಳು ಎಂಎಸ್ ಧೋನಿ ಹಾಗೂ ಸಾಕ್ಷಿ ಅಕ್ಕ. ಐಪಿಎಲ್ ನಂತರ ಕ್ಯಾಪ್ಟನ್ ರಿಲ್ಯಾಕ್ಸ್ ಆಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಮೇ 27ರಂದು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ನಿಂದ ಸೋಲಿಸಿತ್ತು. ನಂತರ ಮೇ 28ರಂದು ಧೋನಿ ತಮ್ಮ ಇಡೀ ತಂಡದ ಜೊತೆ ಚೆನ್ನೈಗೆ ಹೋಗಿದ್ದರು. ಬಳಿಕ 29ರಂದು ರಾಂಚಿಗೆ ವಾಪಸ್ಸಾಗಿದ್ದಾರೆ.

https://twitter.com/Sudhir10dulkar/status/1002512187493998593

https://twitter.com/Sudhir10dulkar/status/1002938724596920321

Comments

Leave a Reply

Your email address will not be published. Required fields are marked *