ಮುಂಬೈ: ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬ್ಯಾಟಿಂಗ್ ನಡೆಸಿದ್ದ ಧೋನಿಯನ್ನು ಟೀಕೆ ಮಾಡಿದ್ದಕ್ಕೆ ಸಚಿನ್ ವಿರುದ್ಧ ಧೋನಿ ಅಭಿಮಾನಿಗಳು ಅಸಮಾಧಾನ ಹೊರ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಟೀಂ ಇಂಡಿಯಾ ತನ್ನ ಜರ್ನಿಯನ್ನು ಆರಂಭ ಮಾಡಿದೆ. ಆದರೆ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ತಿಣುಕಾಡಿ ಗೆಲುವು ಪಡೆದಿತ್ತು. ಪಂದ್ಯದಲ್ಲಿ ನಿಧಾನಗತಿ ಬ್ಯಾಟಿಂಗ್ ನಡೆಸಿದ್ದಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ವಿರುದ್ಧ ಹಲವರು ಟ್ರೋಲ್ ಮಾಡಿ ಕಾಲೆಳೆದಿದ್ದರು. ಇದೇ ಸಂದರ್ಭದಲ್ಲಿ ಸಚಿನ್ ಕೂಡ ಟೀಂ ಇಂಡಿಯಾ ಬ್ಯಾಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
https://twitter.com/NeecheSeTopper/status/1143218629539840000
ಅಫ್ಘಾನಿಸ್ತಾನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ನನಗೆ ನಿರಾಸೆ ತಂದಿದೆ. ತಂಡ 34 ಓವರ್ ಗಳಲ್ಲಿ ಕೇವಲ 119 ರನ್ ಗಳಷ್ಟೇ ಗಳಿಸಿತ್ತು. ತಂಡದ ಅನುಭವಿ ಆಟಗಾರರಾಗಿ ಧೋನಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದು, ಪಂದ್ಯದಲ್ಲಿ ಪಾಸಿಟಿವ್ ಆಗಿ ಕಾಣಿಸಲಿಲ್ಲ ಎಂದು ಹೇಳಿದ್ದರು.
ಸದ್ಯ ಸಚಿನ್ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಭಿಮಾನಿಗಳು, 90ರ ದಶಕದಲ್ಲಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಬ್ಯಾಟ್ಸ್ ಮನ್ ತಾವೊಬ್ಬರೆ ಬಿಗ್ ಹಿಟ್ಟರ್ ಎಂದು ಭಾವಿಸುತ್ತಿದ್ದಾರೆ. ಈ ದೃಷ್ಟಿಯಲ್ಲಿ ಧೋನಿ ಎಷ್ಟೇ ಮೇಲು ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೇ ಖ್ಯಾತ ಆಟಗಾರರು ಇದ್ದ ಸಂದರ್ಭದಲ್ಲಿ ಸಚಿನ್‍ರಿಂದ ಸಾಧ್ಯವಾಗದ್ದನ್ನು ಧೋನಿ ಸಾಧಿಸಿ ಕಾಣಿಕೆ ನೀಡಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.
https://twitter.com/Nirmal_A/status/1143207858047213569
ಅಭಿಮಾನಿಗಳು ಕೇವಲ ಸಚಿನ್ ವಿರುದ್ಧ ಆಕ್ರೋಶ ಹೊರ ಹಾಕದೆ ಕೆಲ ಹೋಲಿಕೆಗಳನ್ನು ನೀಡಿದ್ದು, ಧೋನಿ 52 ಎಸೆತಗಳಲ್ಲಿ 28 ರನ್ ಮಾಡಿದ್ದು, ಜೊತೆಯಲ್ಲಿದ್ದ ಜಾಧವ್ ಕೂಡ ರನ್ ಗಳಿಸಲು ವಿಫಲರಾಗಿದ್ದರು. ಇದೇ ರೀತಿ ಈ ಹಿಂದೆ 6 ಓವರ್ ಆಡಿದ್ದ ನೀವು 1 ಬೌಂಡರಿ ಸಿಡಿಸಲು ವಿಫಲರಾಗಿದ್ದೀರಿ ಎಂದು ನೆನೆಪು ಮಾಡಿದ್ದಾರೆ.
ಧೋನಿ 4ನೇ ಬಾರಿಗೆ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಈ ಬಾರಿಯ ಟೂರ್ನಿಯಲ್ಲಿ ಧೋನಿ ಕ್ರಮವಾಗಿ 28, 1, 27, 34 ರನ್ ಗಳನ್ನು ಮಾತ್ರ ಗಳಿಸಿದ್ದಾರೆ. ಆದರೆ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವಿಫಲವಾದರು ಬೌಲರ್ ಗಳಿಗೆ ಸಲಹೆ ನೀಡುವ ಪಂದ್ಯದ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ನಾಯಕ ಕೊಹ್ಲಿ ಅವರಿಗೆ ಸಲಹೆ ನೀಡುವ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
Sachin 2003 WC runs
673 runsMs Dhoni 2007, 2011, 2015, till afg match
597 runs pic.twitter.com/nttjZiOlpS— Harish godha (@Down_the_track) June 24, 2019

Leave a Reply