‘ಮಿಸ್ಟರ್ ಜೈ’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ಬೆಂಗಳೂರು: ಶ್ರೀ ಗಣೇಶ ಮೂವಿ ಮೇಕರ್ಸ್ ಲಾಂಛನದಲ್ಲಿ ಶ್ಯಾಮಲ.ಕೆ ಅವರು ನಿರ್ಮಿಸುತ್ತಿರುವ ಮಿಸ್ಟರ್ ಜೈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈವರೆಗೂ ಶ್ರೀರಂಗಪಟ್ಟಣ, ಪಾಂಡವಪುರ, ಬೆಂಗಳೂರು ಮುಂತಾದ ಕಡೆ 48 ದಿನಗಳ ಚಿತ್ರೀಕರಣ ನಡೆದಿದೆ.

ವಿನಯ್ ಪಳಂಗೇಟಿರ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ವಿಷ್ಣುವರ್ಧನ, ತಿರುಪತಿ ಎಕ್ಸ್ ಪ್ರೆಸ್, ಜಾಗ್ವಾರ್, ಚಾರುಲತ ಸೇರಿದಂತೆ ಹಲವು ಚಿತ್ರಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪಿ.ಕುಮಾರ್, ತಮಿಳಿನ ಭಾಗ್ಯರಾಜ್, ತೆಲುಗಿನ ಚಂದ್ರ ಮಹೇಶ್, ಕಣ್ಣನ್ ಮುಂತಾದ ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ವಿನಯ್ ಅವರಿಗಿದೆ.

ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಮೂರು ಸಾಹಸ ಸನ್ನಿವೇಶಗಳಿವೆ.

ಶ್ರೀಸಾಯಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಸಾಯಿ ಅವರ ಸಂಗೀತ ನಿರ್ದೇಶನವಿದೆ. ಎಸ್.ಬಿ.ಉದಯ್ ಸಂಕಲನ, ಶಿವಶಂಕರ್ ನೃತ್ಯ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ದೇವರಾಜ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಅರಸು ಅಂತಾರೆ, ಸಿಂಪಲ್ ಸುನಿ, ಸಂತು (ಅಲೆಮಾರಿ) ಹಾಗೂ ಶಿವರಾಜಕುಮಾರ್ ಬರೆದಿದ್ದಾರೆ.


ಜಯಸಿಂಹ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ರಕ್ಷ ಸೋಮಶೇಖರ್, ಬಾಲರಾಜವಾಡಿ, ಕುರಿ ಪ್ರತಾಪ್, ಡ್ಯಾನಿಯಲ್ ಕುಟ್ಟಪ್ಪ, ಯಮುನ ಶ್ರೀನಿಧಿ, ವಿನೋದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *