ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಕೊಳ್ಳಿ- ಸಿಎಂಗೆ ಸಂಸದ ಸುರೇಶ್ ಅಂಗಡಿ ಸಲಹೆ

ಬೆಳಗಾವಿ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಕೊಳ್ಳುವುದು ಉತ್ತಮ ಅಂತಾ ಬಿಜೆಪಿ ಸಂಸದ ಸುರೇಶ್ ಅಂಗಡಿ ಸಲಹೆ ನೀಡಿದ್ದಾರೆ.

ಇಂದು ಕುಮಾರಸ್ವಾಮಿ ಅವರು ದೈವ ಬಲದಿಂದ ಸಿಎಂ ಆಗಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಷರತ್ತು ರಹಿತ ಬೆಂಬಲ ನೀಡಿದ್ದೇವೆ ಅಂತಾ ಜೆಡಿಎಸ್‍ಗೆ ಹೇಳಿದ್ರು. ಇಂದು ಒಂದಾದ ನಂತರ ಒಂದು ಷರತ್ತುಗಳನ್ನು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.

ಹಿಂದಿನ ಬ್ರಿಟಿಷ್ ಕಂಪೆನಿಯನ್ನು ನಂಬಬಹುದಿತ್ತು. ಆದ್ರೆ ಇಂದಿನ ಕಾಂಗ್ರೆಸ್ ಸರ್ಕಾರ ಮತ್ತು ನಾಯಕರನ್ನು ನಂಬಲಿಕ್ಕೆ ಆಗಲ್ಲ. ಜನ ಈ ಬಾರಿ ಯಾವ ಪಕ್ಷಕ್ಕೂ ಬಹುಮತ ನೀಡಿಲ್ಲ. ಆದ್ರೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಬಹುಮತ ಬರದೇ ಇದ್ರೂ ನಾವು ವಿರೋಧ ಪಕ್ಷದಲ್ಲಿ ಕುಳಿತು ಜನರ ಸೇವೆಯನ್ನು ಮಾಡುತ್ತೇವೆ ಎಂದು ಹೇಳಿದ್ರು.

ಚುನಾವಣಾ ಪೂರ್ವದಲ್ಲಿ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡುತ್ತೇನೆ ಅಂತಾ ಹೇಳಿದ್ದರು. ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗುತ್ತೇನೆ ಕಾಲಹರಣ ಮಾಡುತ್ತಿದ್ದಾರೆ. ಅದರ ಬದಲು ಸಿಎಂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಳ್ಳುವುದು ಉತ್ತಮ ಅಂತಾ ಸಲಹೆ ನೀಡಿದ್ರು.

Comments

Leave a Reply

Your email address will not be published. Required fields are marked *