ನಿಮಗೆ ಹೋರಾಟ ಅಲ್ಲ, ಲೂಟಿ ಹೊಡೆದು ಅಭ್ಯಾಸ ಇದೆ: ರೇಣುಕಾಚಾರ್ಯ ವ್ಯಂಗ್ಯ

ದಾವಣಗೆರೆ: ನಿಮಗೆ ಹೋರಾಟ ಅಲ್ಲ, ಲೂಟಿ ಹೊಡೆದು ಅಭ್ಯಾಸ ಇದೆ. ನಿಮ್ಮ ಪ್ರತಿಭಟನೆ ಯಶಸ್ವಿಯಾಗುವುದಿಲ್ಲ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಎಂಪಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ದಾವಣಗೆರೆಯ ಹೊನ್ನಾಳಿ ಯಲ್ಲಿರುವ ನಿವಾಸದಲ್ಲಿ ಪ್ರತಿಕ್ರಿಯೆ ನಿಡಿದ ಅವರು, ಹೋರಾಟ, ಪಾದಯಾತ್ರೆ ಕೇವಲ ಬಿಜೆಪಿಯವರು ಮಾತ್ರ ಮಾಡುತ್ತೇವೆ. ಪ್ರತಿಭಟನೆ ಮಾಡಬೇಕು ಎಂದರೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಂದ ತರಬೇತಿ ಪಡೆಯಿರಿ ಎಂದು ಹೇಳಿದರು.

ರಾಷ್ಟ್ರಧ್ವಜದ ಬಗ್ಗೆ ಸಚಿವ ಕೆ.ಎಸ್ ಈಶ್ವರಪ್ಪ ಅವಹೇಳನಕಾರಿ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಕಶಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಧರಣಿ ನಡೆಸಿರುವ ಕೈ ನಾಯಕರು, ಅಧಿವೇಶನ ಮುಗಿಯುವವರೆಗೂ ಸದನದಲ್ಲಿ ಹೋರಾಟ ಮುಂದುವರೆಸಲು ಕಾಂಗ್ರೆಸ್ ತೀರ್ಮಾನಿಸಿದ್ದಾರೆ. ಜೊತೆಗೆ ಸೋಮವಾರದಿಂದ ತನ್ನ ಜಿಲ್ಲಾ ಹಾಗೂ ತಾಲೂಕು ಘಟಕಗಳ ಮೂಲಕ ನಾಡಿನಾದ್ಯಂತ ಹೋರಾಟ ನಡೆಸಲು ಮುಂದಾಗಿದೆ. ಇದನ್ನೂ ಓದಿ: ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಸೋನು ಸೂದ್ ಕಾರು ಜಪ್ತಿ

Comments

Leave a Reply

Your email address will not be published. Required fields are marked *