ಬೆಂಗಳೂರು: ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸರ್ಕಾರ ರಚನೆಗೂ ಮೊದಲೇ ಸಂಸದ ಪ್ರತಾಪ ಸಿಂಹ ಟ್ವಟ್ಟರ್ ನಲ್ಲಿ ಗುಡುಗಿದ್ದಾರೆ.
ನಮ್ಮ ಕಾರ್ಯಕರ್ತರನ್ನು ಮುಟ್ಟಿದ್ರೆ ಜೋಕೆ!! 24 ಜನರನ್ನು ಕಳೆದುಕೊಂಡ ನೋವಿಗೆ ಅಂತಿಮ ತೆರೆ ಬೀಳಲಿದೆ ಅಂತಾ ಸಂಸದ ಪ್ರತಾಪ್ ಸಿಂಹ ಅಂತಾ ಟ್ವಿಟ್ಟರ್‍ನಲ್ಲಿ ಗುಡುಗಿದ್ದಾರೆ. ಪ್ರತಾಪ್ ಸಿಂಜ ಟ್ವೀಟ್ ಮಾಡುತ್ತಿದ್ದಂತೆ ಸಾಮಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಇದನ್ನೂ ಓದಿ: ಯಡಿಯೂರಪ್ಪ ಪ್ರಮಾಣವಚನಕ್ಕಿಲ್ಲ ತಡೆ- ಸುಪ್ರೀಂಕೋರ್ಟ್ ನಲ್ಲೂ ಕಾಂಗ್ರೆಸ್, ಜೆಡಿಎಸ್‍ಗೆ ಹಿನ್ನಡೆ
27ನೇ ಮುಖ್ಯಮಂತ್ರಿಯಾಗಿ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ರಾಜಭವನದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಬುಧವಾರ ಇಡೀ ದಿನ ಹೈಡ್ರಾಮಾದ ಬಳಿಕ ಕೇಂದ್ರ ಅಟಾರ್ನಿ ಜನರಲ್ ರೋಹಟಗಿ ಅಭಿಪ್ರಾಯ ಸಂಗ್ರಹಿಸಿ ರಾತ್ರಿ 8.05ರ ಹೊತ್ತಿಗೆ ರಾಜಭವನದಿಂದ ಅಧಿಕೃತ ಪ್ರಕಟಣೆ ಹೊರಬಿತ್ತು. ಇನ್ನು ಬಹುಮತ ಸಾಬೀತಿಗೆ 15 ದಿನಗಳ ಅವಕಾಶವನ್ನು ರಾಜ್ಯಪಾಲರು ಕೊಟ್ಟಿದ್ದಾರೆ. ಇನ್ನು ಬಿ.ಎಸ್.ಯಡಿಯೂರಪ್ಪ ಜೊತೆಗೆ 4 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶ್ರೀರಾಮುಲು, ಗೋವಿಂದ ಕಾರಜೋಳ, ಈಶ್ವರಪ್ಪ, ಆರ್.ಅಶೋಕ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ನಮ್ಮ ಕಾರ್ಯಕರ್ತರನ್ನ ನಾಳೆಯಿಂದ ಮುಟ್ಟಿದ್ರೆ ಜೋಕೆ! ೨೩ ಜನರನ್ನ ಕಳೆದುಕೊಂಡ ನೋವಿಗೆ ನಾಳೆ ಅಂತಿಮ ತೆರೆ!!
— Prathap Simha (@mepratap) May 16, 2018

Leave a Reply