ಮೈಸೂರು: ಸಂಸದ ಪ್ರತಾಪ್ ಸಿಂಹ, ಎಸ್‍ಪಿ ರವಿಚನ್ನಣ್ಣನವರ್ ನಡುವಿನ ಸಮರ ಮತ್ತಷ್ಟು ತೀಕ್ಷ್ಣಗೊಳ್ಳುತ್ತಿದೆ. ಇಂದು ಫೇಸ್‍ಬುಕ್ ಲೈವ್ ನಲ್ಲಿ ಎಸ್‍ಪಿ ರವಿಚನ್ನಣ್ಣನವರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಫೇಸ್‍ಬುಕ್ ಲೈವ್‍ನಲ್ಲಿ ರವಿ ಚನ್ನಣ್ಣವರ್ ನೀವು ಪೊಲೀಸ್ ಇಲಾಖೆಗೆ ನಿಷ್ಠರೋ, ಕೆಂಪಯ್ಯ ಅವರಿಗೆ ನಿಷ್ಠರೋ. ನಿಮ್ಮ ಮಾಸ್ಟರ್ ಯಾರು ಅಂತ ನನಗೆ ಗೊತ್ತಿದೆ. ಕರ್ತವ್ಯದ ಹೆಸರಿನಲ್ಲಿ ಜಿಲ್ಲಾಧಿಕಾರಿಗಳನ್ನು ಎಳೆದು ತರಬೇಡಿ. ಹುಣಸೂರು ಪ್ರಕರಣವನ್ನು ಪಬ್ಲಿಕ್ ಟಿವಿ ಸರಿದೂಗಿಸಿದೆ. ರಂಗನಾಥ್ ಅವರು ಒಳ್ಳೆಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು.

ಹಿಂದಿನ ಫೇಸ್‍ಬುಕ್ ಲೈವ್ ಕುರಿತ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ನನ್ನ ಫೇಸ್‍ಬುಕ್ ಲೈವ್‍ನ ಒಂದು ತುಣುಕನ್ನು ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ಅದನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಹಾಗೂ ಕೆಲ ಮಾಧ್ಯಮಗಳ ನನ್ನ ಮೇಲೆ ಆರೋಪ ಮಾಡುತ್ತಿವೆ. ಆದರೆ ಆ ವಿಡಿಯೋ ಹಿಂದಿನ ಹಾಗೂ ಮುಂದಿನ ಭಾಗವನ್ನು ನೋಡಿ ಸುದ್ದಿ ಬಿತ್ತರಿಸಿ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದು ಸರ್ಕಾರದ ಮೇಲೆ ಒತ್ತಡ ತರುವ ಪ್ರತಿಭಟನೆ ಮಾಡಿದ್ದೀರಾ ಅಂತ. ನಾನು ಅದಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.
https://www.youtube.com/watch?v=4lHDGBADYCs










Leave a Reply