ಮೋದಿ ಟೀಕಿಸಿದ್ದ ರಮ್ಯಾಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು ಹೀಗೆ

ಬೆಂಗಳೂರು: ಹರ್ಯಾಣ ಸಿಎಂ ರಾಜೀನಾಮೆ ಪಡೆಯದ ಮೋದಿ ನಿಲುವನ್ನು ಟೀಕಿಸಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಮನೋಹರ್ ಲಾಲ್ ಖಟ್ಟರ್ ಅವರ ರಾಜೀನಾಮೆ ಪಡೆಯದೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪ್ರದಾಯವನ್ನು ಮುಂದುವರಿಸಿದ್ದಾರೆ ಎಂದು ರಮ್ಯಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಾಪ್ ಸಿಂಹ ಅವರು, ಎಂ.ಕೆ.ಗಣಪತಿ ಕೇಸ್‍ನಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ರಿಪೋರ್ಟ್ ಆಧಾರದ ಮೇಲೆ ಕರ್ನಾಟಕ ಸಿಎಂ ಸಚಿವ ಜಾರ್ಜ್ ರಾಜೀನಾಮೆ ಪಡೆಯಬಹುದಲ್ಲವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಇಬ್ಬರ ಟ್ವೀಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಹರ್ಯಾಣದ ಮುಖ್ಯಮಂತ್ರಿ ಜೊತೆ ಕೆಜೆ ಜಾರ್ಜ್ ರಾಜೀನಾಮೆ ನೀಡುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

https://twitter.com/ChaithanyaJai/status/901458220106915840

https://twitter.com/mudakammanavar/status/901381472686194688

Comments

Leave a Reply

Your email address will not be published. Required fields are marked *