10 ದಿನಗಳ ಬಂಧನದ ಬಳಿಕ ರಾಣಾ ದಂಪತಿಗೆ ಜಾಮೀನು

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿಷಯದಲ್ಲಿ ಟೀಕೆ ಹಾಗೂ ದ್ವೇಷ ಪ್ರಚೋದನಾ ಕೃತ್ಯಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಬಂಧನಕ್ಕೊಳಗಾಗಿದ್ದ ನವನೀತ್ ರಾಣಾ ಹಾಗೂ ಅವರ ಪತಿ ಶಾಸಕ ರವಿ ರಾಣಾ ಅವರಿಗೆ 10 ದಿನಗಳ ಬಳಿಕ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ಅಮರಾವತಿಯ ಸಂಸದ ಬದ್ನೇರಾ ಶಾಸಕ ರವಿ ರಾಣಾ ಹಾಗೂ ಅವರ ಪತ್ನಿ ನವನೀತ್ ರಾಣಾ ಅವರನ್ನು ಏಪ್ರಿಲ್ 23ರಂದು ಬಂಧಿಸಲಾಗಿತ್ತು. ದಂಪತಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಖಾಸಗಿ ನಿವಾಸದ ಬಳಿ ಹನುಮಾನ್ ಚಾಲೀಸ ಪಠಿಸುವ ಯೋಜನೆ ಹಮ್ಮಿಕೊಂಡಿದ್ದರು. ಆದರೆ ಅವರನ್ನು ಬಂಧಿಸಿದ್ದರಿಂದ ಆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಓದಿ: ಧನುಷ್ ತಮ್ಮ ಮಗ ಅಂತ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ: ನಟನಿಗೆ ಮದ್ರಾಸ್ ಕೋರ್ಟ್ ಸಮನ್ಸ್

ದಂಪತಿ ವಿರುದ್ಧ ಸೆಕ್ಷನ್ 153(ಎ)(ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಾಗೂ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತನ್ನ ಗಂಡನನ್ನು ಬೇರೊಬ್ಬರ ಜೊತೆ ಹಂಚಿಕೊಳ್ಳಲು ಮಹಿಳೆ ಇಷ್ಟಪಡಲ್ಲ: ಅಲಹಾಬಾದ್‌ ಹೈಕೋರ್ಟ್‌

ರಾಣಾ ದಂಪತಿ ಸರ್ಕಾರ ಯಂತ್ರಕ್ಕೆ ಸವಾಲು ಹಾಕಿದ ಹಾಗೂ ಉದ್ಧವ್ ಠಾಕ್ರೆ ವಿರುದ್ಧ ಟೀಕೆ ಮಾಡಿದ್ದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್ 124(ಎ)(ದೇಶದ್ರೋಹ) ಅಡಿಯಲ್ಲಿ ಆರೋಪ ಮಾಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ತಿಳಿಸಿದ್ದರು. ಇದೀಗ ಬಂಧನದ 10 ದಿನಗಳ ಬಳಿಕ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Comments

Leave a Reply

Your email address will not be published. Required fields are marked *