ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ದರ್ಗಾ ಹೋಲುವ ಕಟ್ಟಡ – ತೆರವಿಗೆ ಸಂಸದ ಪತ್ರ

ಕೊಪ್ಪಳ: ನಗರದ ರೈಲ್ವೆ ನಿಲ್ದಾಣದಲ್ಲಿನ (Railway Station) ಅನಧಿಕೃತ ಕಟ್ಟಡ ತೆರವು ಮಾಡುವಂತೆ ಸಂಸದ ಸಂಗಣ್ಣ ಕರಡಿ (Sanganna Karadi) ಪತ್ರ ಬರೆದಿದ್ದಾರೆ.

ರೈಲ್ವೇ ಇಲಾಖೆಯ ನೈಋತ್ಯ ವಲಯದ ಜನರಲ್ ಮ್ಯಾನೇಜರ್‌ಗೆ ಪತ್ರ ಬರೆದಿರುವ ಸಂಗಣ್ಣ ಕರಡಿ, ಕೊಪ್ಪಳದ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ದರ್ಗಾ (Dargah) ಹೋಲುವ ಕಟ್ಟೆ ನಿರ್ಮಾಣ ಮಾಡಲಾಗಿದೆ. ಪ್ಲಾಟ್‌ಫಾರ್ಮ್ 1 ರಲ್ಲಿರುವ ಅರಳಿ ಮರದ ಕೆಳಗೆ ಕಟ್ಟೆ ಕಟ್ಟಿ ಅದಕ್ಕೆ ಹಸಿರು ಬಣ್ಣ ಬಳಿಯಲಾಗಿದೆ. ಜೊತೆಗೆ ಸಕ್ಕರೆ, ಉಪ್ಪು ಹಾಕಿ ದರ್ಗಾ ಮಾದರಿ ಪೂಜೆ ಸಲ್ಲಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವೀಡಿಯೋಗಳು ಹರಿದಾಡಿವೆ. ಇದನ್ನೂ ಓದಿ: ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನೀಡುವ ಪದ್ಧತಿಯನ್ನು ಅಂತ್ಯಗೊಳಿಸಲು ಚಿಂತಿಸುತ್ತಿದ್ದೇವೆ- ಸಿಜೆಐ

ರೈಲ್ವೆ ನಿಲ್ದಾಣದಲ್ಲಿ ಇಸ್ಲಾಮೀಕರಣ ಹೇರಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿರುವ ಸಂಸದ ಸಂಗಣ್ಣ ಕರಡಿ, ಅರ್ಧಂಬರ್ಧ ತೆರೆವು ಗೊಳಿಸಲಾಗಿರುವ ಕಟ್ಟಡವನ್ನು ಕೂಡಲೇ ಸಂಪೂರ್ಣ ತೆರವುಗೊಳಿಸುವಂತೆ ಕೋರಿದ್ದಾರೆ. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಸಿಎಂ ವಿರುದ್ಧ ಸ್ಪರ್ಧೆ ನನ್ನ ಅಪೇಕ್ಷೆಯಲ್ಲ, ಅದು ಹೈಕಮಾಂಡ್ ನಿರ್ಧಾರ: ವಿನಯ್ ಕುಲಕರ್ಣಿ

Comments

Leave a Reply

Your email address will not be published. Required fields are marked *