ತಂದೆಯ ಪುಣ್ಯತಿಥಿಯಂದು ತಾಯಿಯೊಂದಿಗೆ ಗಿಡ ನೆಟ್ಟ ಸಂಸದ ಕಾಗೇರಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ‌ ಕಾಗೇರಿಯವರು (Vishweshwar Hegde Kageri) ತಂದೆ ಅನಂತ್ ಹೆಗಡೆಯವರ 5ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ತಾಯಿ ಸರ್ವೇಶ್ವರಿ ಹೆಗಡೆಯವರೊಂದಿಗೆ ಶಿರಸಿಯ ಕಾಗೇರಿಯ ತಮ್ಮ ನಿವಾಸದಲ್ಲಿ ತಾಯಿ ಹೆಸರಲ್ಲಿ ಗಿಡ ನೆಟ್ಟರು.

ಪ್ರಧಾನಿ ನರೇಂದ್ರ ಮೋದಿಯವರು ಇಂದು ಮನ್ ಕಿ ಬಾತ್ (Man Ki Bath) ರೇಡಿಯೋ ಕಾರ್ಯಕ್ರಮದಲ್ಲಿ ಅಮ್ಮನ ಹೆಸರಿನಲ್ಲಿ ಒಂದು ಗಿಡ ನೆಡುವ ಅಭಿಯಾನಕ್ಕೆ ಕರೆಕೊಟ್ಟ ಬೆನ್ನಲ್ಲೇ ಕಾಗೇರಿ ಈ ಕೆಲಸ ಮಾಡಿದ್ದಾರೆ. 2019ರ ಜೂನ್ ನಲ್ಲಿ ಅನಂತ್ ಹೆಗಡೆಯವರು ನಿಧನರಾಗಿದ್ದಾರೆ. ಇಂದು ಅವರ 5 ನೃ ವರ್ಷದ ಪುಣ್ಯತಿಥಿ ಕೂಡ ಮಾಡಲಾಗಿದೆ.

ಪ್ರತಿಯೊಬ್ಬರಿಗೂ ಅಮ್ಮನ ಪ್ರೀತಿ ಬಹಳ ಮುಖ್ಯ. ಅಮ್ಮನ ಈ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವ ಪರಿಸರ ದಿನಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ್ದೇವೆ. ಏಕ್ ಪೇಡ್, ಮಾ ಕೆ ನಾಮ್ ಕ್ಯಾಂಪೇನ್ ಇದು ಎಂದು ಮೋದಿ ಹೇಳಿದ್ದರು. ಇದನ್ನೂ ಓದಿ: ಸ್ವಾಮೀಜಿಗಳು ವೇದಿಕೆ, ಸಂದರ್ಭ ನೋಡಿ ಮಾತಾಡಿದ್ರೆ ಒಳ್ಳೆಯದು: ಪರಂ

#Plant4Mother ಹ್ಯಾಶ್ ಟ್ಯಾಗ್ ಉಪಯೋಗಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಂತೆಯೂ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಹ ಅಮ್ಮನೊಂದಿಗೆ ಗಿಡ ನೆಟ್ಟು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಷೇರ್ ಮಾಡಿದ್ದಾರೆ.