ಸಚಿವ ಅಶ್ವಥ್ ನಾರಾಯಣ್, ಸಂಸದ ಡಿ.ಕೆ.ಸುರೇಶ್ ಏಕವಚನದಲ್ಲೇ ವಾಕ್ಸಮರ – ದಂಗಾದ ಸುಧಾಕರ್

ರಾಮನಗರ: ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆ ಹಿನ್ನೆಲೆಯಲ್ಲಿ ಉಸ್ತುವರಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರನ್ನು ಸಂಸದ ಡಿ.ಕೆ ಸುರೇಶ್ (DK Suresh) ತರಾಟೆಗೆ ತೆಗೆದುಕೊಂಡರು.

ಇಂದು ರಾಮನಗರ (Ramnagar) ಜಿಲ್ಲಾಸ್ಪತ್ರೆ ನೂತನ ಕಟ್ಟಡ ಉದ್ಘಾಟನೆಯಾಗಿದ್ದು, 3 ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನೂತನ ಆಸ್ಪತ್ರೆಯ ಕ್ರೆಡಿಟ್ ಯಾರಿಗೆ ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಅಶ್ವಥ್ ನಾರಾಯಣರನ್ನು ಸಂಸದ ಡಿಕೆ ಸುರೇಶ್ ಅವರು ತರಾಟೆಗೆ ತೆಗೆದುಕೊಂಡ ಘಟನೆಯು ನಡೆದಿದೆ. ಪ್ರೋಟೋಕಾಲ್ ಸರಿಯಾಗಿ ಪಾಲಿಸಲು ಆಗುವುದಿಲ್ವ ಎಂದು ಸಚಿವ ಅಶ್ವಥ್ ನಾರಾಯಣ್‍ಗೆ ಸಂಸದ ಡಿ.ಕೆ. ಸುರೇಶ್ ತರಾಟೆ ತೆಗೆದುಕೊಂಡರು.

ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿ.ಕೆ.ಸುರೇಶ್ ಅವರು, ಯಾರ್ ರೀ ಅವನು ಡಿಸ್ಟ್ರಿಕ್ಟ್ ಕಮಿಷನರ್ ಏಯ್, ಇರ್ರೀ ಮಂತ್ರಿಗಳೇ. ನಿಂತ್ಕೊಳ್ರಿ.. ನಾನು ಒಬ್ಬ ರೆಪ್ರಸೆಂಟೇಟಿವ್. ನನಗೂ ಪ್ರೋಟೋಕಾಲ್ ಇದೆ. ನಿಮ್ಮೊಬ್ಬರಿಗೆ ಅಲ್ಲ. ನೀವೊಬ್ಬರು ಡಿಸ್ಟ್ರಿಕ್ಟ್ ಮಿನಿಸ್ಟರ್ ಆಗಿ, ಡಿಪ್ಯುಟಿ ಚೀಫ್ ಮಿನಿಸ್ಟರ್ ಆಗಿದ್ದವರಿಗೆ ಗೊತ್ತಾಗಲ್ವಾ? ಎಂದು ಕಿಡಿಕಾರಿದರು. ಇದನ್ನೂ ಓದಿ: ಎ.ಮಂಜು ಜೊತೆ ಅಡ್ಜಸ್ಟ್ ಸಾಬೀತುಪಡಿಸಿದ್ರೆ ರಾಮಸ್ವಾಮಿ ಹೇಳುವ ಶಿಕ್ಷೆಗೆ ಗುರಿಯಾಗ್ತೀನಿ: ರೇವಣ್ಣ

ಈ ವೇಳೆ ನಿಮ್ಮನ್ನ ಯಾರು ಬರಬೇಡ ಅಂದ್ರು? ಗಲಾಟೆ ಬೇಡ ಮಾತನಾಡೋಣ ಎಂದ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು. ಈ ವೇಳೆ ಡಿಕೆ ಸುರೇಶ್ ಹಾಗೂ ಅಶ್ವಥ್ ನಾರಾಯಣ್ ವಾಕ್ಸಮರಕ್ಕೆ ಅಲ್ಲೇ ಇದ್ದ ಸಚಿವ ಸುಧಾಕರ್ (Sudhakar) ದಂಗಾದರು. ಇದನ್ನೂ ಓದಿ: ಜೆಡಿಎಸ್, ಬಿಜೆಪಿಗೆ ಕಾಂಗ್ರೆಸ್ ಗಾಳ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ

Comments

Leave a Reply

Your email address will not be published. Required fields are marked *