ಕೆಸರೆಚಿದವನ ಕೈಯಲ್ಲೇ ಪ್ಯಾಂಟ್ ಕ್ಲೀನ್ ಮಾಡಿಸಿ ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್

ಭೋಪಾಲ್: ಪ್ಯಾಂಟ್ ಮೇಲೆ ಕೆಸರೆಚಿದವನ ಕೈಯಲ್ಲೇ ಕ್ಲೀನ್ ಮಾಡಿಸಿಕೊಂಡ ಮಹಿಳಾ ಪೊಲೀಸ್, ಆತನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ವೀಡಿಯೋದಲ್ಲಿ ಏನಿದೆ?
ವ್ಯಕ್ತಿಯೊಬ್ಬನು ತನ್ನ ಬೈಕ್ ಅನ್ನು ಹಿಂದೆ ತೆಗೆಯಬೇಕಾದಾಗ ಮಹಿಳಾ ಪೊಲೀಸ್ ಸಿಬ್ಬಂದಿಯ ಪ್ಯಾಂಟ್ ಮೇಲೆ ಕೆಸರು ಹಾರಿದೆ. ಅದಕ್ಕೆ ಪೊಲೀಸ್ ಕೋಪಗೊಂಡಿದ್ದು, ಕೆಸರು ಒರೆಸುವಂತೆ ಹೇಳಿದ್ದಾರೆ. ನಂತರ ಆ ವ್ಯಕ್ತಿ ಪ್ಯಾಂಟ್ ಮೇಲೆ ಬಿದ್ದಿದ್ದ ಕೆಸರನ್ನು ಒರೆಸಿ ಮೇಲೆಕ್ಕೆ ಎದ್ದ ತಕ್ಷಣ ಆ ಸಿಬ್ಬಂದಿ ಆತನ ಕಪಾಳಕ್ಕೆ ಹೊಡೆದು ಅಲ್ಲಿಂದು ಹೊರಟು ಹೋಗಿದ್ದಾರೆ. ಈ ವೀಡಿಯೋವನ್ನು ದೂರದಿಂದ ಮೊಬೈಲ್ ನಲ್ಲಿ ಸೆರೆಹಿಡಿಯಾಲಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿದೆ. ಇದನ್ನೂ ಓದಿ: 800 ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯದಲ್ಲಿ ಸರಳ ವೈಕುಂಠ ಏಕಾದಶಿ

ವೀಡಿಯೋವನ್ನು ಅನುರಾಗ್ ದ್ವಾರಿ ಟ್ವಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಮಧ್ಯಪ್ರದೇಶದ ರೇವಾದಲ್ಲಿ, ಸಿರ್ಮೌರ್ ಚೌಕ್ ಬಳಿ ಮಹಿಳಾ ಪೆÇಲೀಸ್ ಪ್ಯಾಂಟ್ ಅನ್ನು ಯುವಕ ಮೊದಲ ಸ್ವಚ್ಛಗೊಳಿಸಿದನು. ನಂತರ ಮಹಿಳಾ ಪೊಲೀಸ್ ಯುವಕನ ಮೇಲೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಈ ವೀಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಪ್ರತಿಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸ್ ಮಹಿಳೆ ತಲೆಗೆ ಬಿಳಿ ಸ್ಕಾರ್ಫ್ ಸುತ್ತಿಕೊಂಡಿದ್ದರಿಂದ ಮುಖ ಕಾಣುತ್ತಿಲ್ಲ. ಆದರೆ ಅವರು ಶಶಿಕಲಾ ಎಂದು ಗುರುತಿಸಲಾಗಿದ್ದು, ಗೃಹರಕ್ಷಕ ದಳದ ಕಾನ್‍ಸ್ಟೆಬಲ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಎಸ್‍ಪಿ ಶಿವಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನಾವು ವೀಡಿಯೋವನ್ನು ನೋಡಿದ್ದೇವೆ. ಆ ವೀಡಿಯೋದಲ್ಲಿ ಒಬ್ಬ ಯುವಕ ಅಧಿಕಾರಿಯ ಪ್ಯಾಂಟ್ ಅನ್ನು ಬಲವಂತವಾಗಿ ಒರೆಸುವಂತೆ ತೋರಿಸುತ್ತಿದ್ದೆ. ಪ್ಯಾಂಟ್ ಒರೆಸಿದ ಮೇಲೆ ಯುವಕನಿಗೆ ಕಪಾಳಮೋಕ್ಷ ಮಾಡಿ ಅಲ್ಲಿಂದ ಹೋಗಿದ್ದಾರೆ. ಈ ಬಗ್ಗೆ ಇನ್ನೂ ಯಾರು ದೂರನ್ನು ನೀಡಿಲ್ಲ. ಈ ಕುರಿತು ಯಾರಾದರೂ ದೂರು ನೀಡಿದರೆ, ನಂತರ ನಾವು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

ಈ ವೀಡಿಯೋದಲ್ಲಿ ಪೊಲೀಸ್ ಮೇಲೆ ಮಣ್ಣು ಬಿದ್ದ ದೃಶ್ಯ ಸೆರೆಯಾಗಿಲ್ಲ. ಆದರೆ ನಂತರ ಯುವಕ ಪ್ಯಾಂಟ್ ಒರೆಸುತ್ತಿರುವುದು ಮಾತ್ರ ಸೆರೆಯಾಗಿದೆ.

Comments

Leave a Reply

Your email address will not be published. Required fields are marked *