ಗುಜರಾತ್‌ | ಹೊತ್ತಿ ಉರಿಯುತ್ತಾ 10 ಕಿ.ಮೀ ಸಂಚರಿಸಿದ ಟ್ರಕ್‌ – ಅದೃಷ್ಟವಶಾತ್‌ ಚಾಲಕ ಪಾರು!

ಗಾಂಧಿನಗರ: ಗುಜರಾತ್‌ನ (Gujarat) ಗೊಂಡಲ್ ಕೋಳಿತಾಡ್‌ನಲ್ಲಿ ಮೆಣಸಿನಕಾಯಿ ಚೀಲಗಳನ್ನು ತುಂಬಿದ್ದ ಟ್ರಕ್ (Truck) ಹೈಟೆನ್ಷನ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡ  (Fire Accident) ಘಟನೆ ನಡೆದಿದೆ.

ಬೆಂಕಿ ಹೊತ್ತಿದ್ದ ಟ್ರಕ್ ನಿಲ್ಲಿಸಲು ಜನ ಯತ್ನಿಸಿದ್ದಾರೆ. ಆದರೆ ಚಾಲಕನ ಗಮನಕ್ಕೆ ಬರದೇ ಟ್ರಕ್‌ ಸುಮಾರು 10 ಕಿ.ಮೀ ಚಲಿಸಿದೆ. ಬಳಿಕ ಚಾಲಕನಿಗೆ ತಿಳಿದಾಗ, ಚಾಲಕ ಟ್ರಕ್‌ನಿಂದ ಜಿಗಿದಿದ್ದಾನೆ. ಬಳಿಕ ಇಡೀ ಟ್ರಕ್ ಬೆಂಕಿಗೆ ಆಹುತಿಯಾಗಿದೆ.

158 ಚೀಲಗಳನ್ನು ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು. ಟ್ರಕ್ ಸೇತುವೆಯೊಂದರ ಮೇಲೆ ಹಾದುಹೋಗುವಾಗ 11 ಕಿಲೋವೋಲ್ಟ್ ಹೈಟೆನ್ಷನ್ ತಂತಿಗೆ ತಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ಮಾಡಿ ಬೆಂಕಿ ನಂದಿಸಿದ್ದಾರೆ.

ಈ ಸರಕು ರಾಜಸ್ಥಾನದ ಉದ್ಯಮಿಯೊಬ್ಬರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.