ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್

ಜೊತೆ ಜೊತೆಯಲಿ, ಶುಭ ವಿವಾಹ, ಮಾನಸ ಸರೋವರ ಸೇರಿದಂತೆ ಹಲವು ಧಾರಾವಾಹಿಗಳ ನಿರ್ದೇಶಿಸಿ, ಕಳೆದ ಹದಿನೈದು ವರ್ಷಗಳಿಂದ ಕಿರುತೆರೆ ಲೋಕದಲ್ಲಿ ಛಾಪು ಮೂಡಿಸಿರುವ ನಿರ್ದೇಶಕ ರಾಮಚಂದ್ರ ವೈದ್ಯ ಈಗ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಒಂದಂಕೆ ಕಾಡು’ ಸಿನಿಮಾ ಮೂಲಕ ಚಂದನವನದ ಅಂಗಳ ಪ್ರವೇಶಿಸಿದ್ದಾರೆ. ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

ರಾಮಚಂದ್ರ ವೈದ್ಯ ನಿರ್ದೇಶನದಲ್ಲಿ  ಮೂಡಿ ಬರ್ತಿರುವ ಒಂದಂಕೆ ಕಾಡು ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ದಟ್ಟ ಅರಣ್ಯ ಮರದ ಬೇರಿನಿಂದ ಸೃಷ್ಟಿಸಿರುವ ಒಂದಾಕೃತಿ, ಅರಣ್ಯದಲ್ಲಿ ಕುಳಿತಿರುವ ಎರಡು ಜೋಡಿ ಹೀಗೆ ಸಾಕಷ್ಟು ಸ್ಪೆಷಾಲಿಟಿಯಿಂದ ಮೋಷನ್ ಪೋಸ್ಟರ್ ಕೂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದೆ. ಇದನ್ನೂ ಓದಿ:`ಅದ್ದೂರಿ ಲವರ್’ಗಾಗಿ `ಕಿಸ್’ ಹೀರೋ ವಿರಾಟ್ ಭರ್ಜರಿ ವರ್ಕೌಟ್

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಒಂದಂಕೆ ಕಾಡು ಸಿನಿಮಾದಲ್ಲಿ ಪ್ರಜ್ವಲ್ ಪೊನ್ನನ್ನ ಸೋನಿ ಮುಲೇವ ,  ನೀರ್ನಳ್ಳಿ ರಾಮಕೃಷ್ಣ, ಕಿರಣ್ ನಾಯಕ್, ಮಧು ಹೆಗಡೆ, ಸುಮಂತ್ ಭಟ್, ಪ್ರೇರಣಾ ಕಂಬಂ  ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಇದನ್ನೂ ಓದಿ:ನಿಮ್ಮ ಹೃದಯವೇ ನನ್ನ ಸಾಮ್ರಾಜ್ಯ: ಅಭಿಮಾನಿಗಳಿಗೆ ಸುಂದರ ಕಥೆ ಹೇಳಿದ ರಾಕಿಭಾಯ್

ಒಂದಂಕೆ ಕಾಡು ಸಿನಿಮಾಗೆ ಶ್ರಾವಣಿ ಶಿವ್ ಕಥೆ, ರಾಮಚಂದ್ರ ವೈದ್ಯ ಚಿತ್ರಕಥೆ ಬರೆದಿದ್ದು, ಟಿಜಿ ನಂದೀಶ್ ಸಂಭಾಷಣೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಉಗ್ರಂ, ಕೆಜಿಎಫ್ ಚಾಪ್ಟರ್-1 ಸಿನಿಮಾ ಖ್ಯಾತಿ  ಶ್ರೀಕಾಂತ್ ಸಂಕಲನ, ಮಧು ಹೆಗ್ಡೆ ಮ್ಯೂಸಿಕ್ ಸಿನಿಮಾದಲ್ಲಿದೆ. ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿ ಸಿನಿಮಾ ತಯಾರಾಗಿದ್ದು, ಕನ್ನಡದ ಹಾಡುಗಳಿಗೆ ಹೃದಯ ಶಿವ ಹಾಗೂ ಡಾಕ್ಟರ್ ಉಮೇಶ್ ಸಾಹಿತ್ಯ ಬರೆದಿದ್ದು, RRR ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗೆ ಸಾಹಿತ್ಯ ಬರೆದಿರುವ ವರದರಾಜು ಚಿಕ್ಕಬಳ್ಳಾಪುರ ತೆಲುಗಿನಲ್ಲಿ ಈ ಸಿನಿಮಾಗೆ ಸಾಹಿತ್ಯ ಬರೆದಿದ್ದಾರೆ.

Comments

Leave a Reply

Your email address will not be published. Required fields are marked *