ಕೊರೊನಾದಿಂದ ಮೃತಪಟ್ಟ ತಾಯಿಯ ಪ್ರತಿಮೆ ಪ್ರತಿಷ್ಠಾಪಿಸಿದ ಮಗ

ಹೈದರಾಬಾದ್: ಕೊರೊನಾ(CORONA)ದಿಂದ ಮೃತಪಟ್ಟ ತಾಯಿಯ (MOTHER) ನೆನಪಿಗಾಗಿ ಮಗ ಪ್ರತಿಮೆ ಪ್ರತಿಷ್ಠಾಪಿಸಿದ್ದಾನೆ. ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಸಿಂಹಪುರಿ ಕಾಲೋನಿಯಲ್ಲಿ ವಾಸವಾಗಿರುವ ರಾಮ್‍ಕುಮಾರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ರಾಮ್‍ಕುಮಾರ್ ಅವರ ತಾಯಿ ವಿಜಯಲಕ್ಷ್ಮಿ(59) ಕಳೆದ ವರ್ಷ ಮೇ 26 ರಂದು ಕೊರೊನಾದಿಂದ ಮೃತಪಟ್ಟಿದ್ದರು. ತಾಯಿಯ ನಿಧನವನ್ನು ಅರಗಿಸಿಕೊಳ್ಳಲಾಗದ ಪುತ್ರ ಅಮ್ಮನ ಚಿತ್ರವನ್ನು ಬಿಡಿಸಿ ಅದನ್ನು ದೇವರಂತೆ ಪೂಜಿಸಿದರು. ಇದೂ ಕೂಡ ರಾಮ್‍ಕುಮಾರ್‌ಗೆ ತೃಪ್ತಿ ನೀಡಲಿಲ್ಲ. ಆಗ ಒಂದು ಮಹತ್ತರವಾದ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: 26ವರ್ಷ ಸಿನಿ ಜರ್ನಿಗೆ ಜೊತೆಯಾದ ಪತ್ನಿಗೆ ಕಿಚ್ಚನ ಧನ್ಯವಾದ

ತಾಯಿಯ ಪ್ರತಿಮೆ ಮಾಡುವ ಆಲೋಚನೆ ಬಂದಿದೆ. ನಂತರ ಈ ಪ್ರತಿಮೆ ತಯಾರಿಸಲು ರಾಜಸ್ಥಾನದ ಕಲಾವಿದನಿಗೆ ರಾಮ್‍ಕುಮಾರ್ ಹೇಳಿದ್ದನು. ಎರಡು ದಿನಗಳ ಹಿಂದೆಯಷ್ಟೇ ತಾಯಿಯ ಪ್ರತಿಮೆ ಕೈಸೇರಿದೆ. ಅಮೃತಶಿಲೆಯಿಂದ ಮಾಡಿರುವ ಮೂರೂವರೆ ಅಡಿ ಎತ್ತರದ ಈ ಪ್ರತಿಮೆಗಾಗಿ ಇವರು ಸುಮಾರು ಒಂದು ಲಕ್ಷ ರೂ. ಖರ್ಚು ಮಾಡಿದ್ದಾರೆ. ಈ ಪ್ರತಿಮೆಯನ್ನು ಮನೆಯಲ್ಲೇ ಸ್ಥಾಪಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಕತ್ರಿನಾ ಮದುವೆಗೆ ವಿಶ್ ಮಾಡಿದ ಸಲ್ಮಾನ್ ಖಾನ್

ಈ ಕೂರಿತಾಗಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿ ರಾಮ್‍ಕುಮಾರ್, ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ. ಅವರ ನೆನಪನ್ನು ಹಿಡಿದಿಡಬೇಕು. ಕೇವಲ  ಫೋಟೋವನ್ನು ಗೋಡೆಗೆ ನೇತುಹಾಕುವ ಬದಲು ದೇವರಂತೆ ಪೂಜಿಸಲು ಬಯಸುತ್ತೇನೆ. ಈ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಮನಸ್ಸಲ್ಲಿ ಆಲೋಚನೆ ಬಂದ ಕೂಡಲೇ ಕಂಚಿನ ವಿಗ್ರಹ ಮಾಡಿಸೋದಾ, ಸಿಮೆಂಟ್ ವಿಗ್ರಹ ಮಾಡಿಸೋದಾ ಅನ್ನೋ ಗೊಂದಲದಲ್ಲಿದ್ದೆ. ಆದರೆ ಅಮೃತ ಶಿಲೆಯಲ್ಲಿ ಮಾಡಿಸಿದರೆ ನಮ್ಮೊಂದಿಗೆ ಅಮ್ಮ ಶಾಶ್ವತವಾಗಿ ಇರುತ್ತಾಳೆ ಎನ್ನುವ ಭಾವನೆ ನನಗೆ ಇದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *