ಮದ್ವೆ ಆದ್ಮೇಲೆ ಗಂಡನ ಜೊತೆ ಹೇಗಿರಬೇಕು ಅಂತ ಹೇಳ್ಕೊಡ್ತೀನಿ – ತಾಯಿಯಿಂದಲೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ!

ಬೆಂಗಳೂರು: ಮದುವೆಯಾದ ನಂತರ ಗಂಡನ ಜೊತೆ ಹೇಗಿರಬೇಕು ಎಂದು ಹೇಳಿಕೊಡುತ್ತೇನೆ ಎಂದು ಮಗಳ ಮೇಲೆ ತಾಯಿಯೊಬ್ಬಳು (Mother) ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಂಗಳೂರಿನಲ್ಲಿ (Bengaluru) ನಡೆದಿದೆ.

ತಂದೆ, ಮಾವ, ಅಣ್ಣ ಮನೆ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರೋದನ್ನ ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಪಾಪಿ ತಾಯಿ ಸ್ವಂತ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಇದು ನಂಬಲು ಸಾಧ್ಯವಾಗದಿದ್ದರೂ ನಿಜ. ಕಳೆದ ಆರು ವರ್ಷಗಳಿಂದ ನಿರಂತರವಾಗಿ ತಾಯಿಯೇ ಮಗಳ ಮೇಳೆ ದೌರ್ಜನ್ಯ ಎಸಗಿದ್ದಾಳೆ. ಇದನ್ನೂ ಓದಿ: ಕೋಡಿಮಠ ಸ್ವಾಮೀಜಿ ಚಿನ್ನಾಭರಣ ಕಳ್ಳತನ; 7 ವರ್ಷಗಳ ಬಳಿಕ ಆರೋಪಿ ಬಂಧನ

ಖಾಸಗಿ ಶಾಲೆಯಲ್ಲಿ (School) ಓದುತ್ತಿದ್ದ ಬಾಲಕಿ ಈ ವಿಚಾರವಾಗಿ ಶಿಕ್ಷಕರ ಬಳಿ ಹೇಳಿಕೊಂಡಿದ್ದಾಳೆ. ಈ ಸಂಬಂಧ  ನಗರದ ಪೊಲೀಸ್ ಠಾಣೆ ಒಂದರಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: 5 ಹುಲಿಗಳ ಸಾವು ಕೇಸ್ – ಮೃತ ಹಸು ಮಾಲೀಕ ಸೇರಿ ಮೂವರ ಬಂಧನ