ತುಮಕೂರು: ಯುವಕನೊಬ್ಬ ತನ್ನ ಚಿಕ್ಕಮ್ಮನನ್ನೇ ಪ್ರೀತಿಸಿ ಮನೆಯಿಂದ ಪರಾರಿಯಾಗಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ತುರುವೇಕೆರೆ ತಾಲೂಕಿನ ಸಾದರಹಳ್ಳಿಯಲ್ಲಿ ಮುರುಳಿ(23) ಎಂಬಾತನು ತನ್ನ ಸ್ವಂತ ಚಿಕ್ಕಮ್ಮ ವಿಜಯಕಲಾ(32) ಜೊತೆ ಕಳೆದ ಆರು ತಿಂಗಳಿಂದ ಲವ್ವಿಡವ್ವಿ ನಡೆಸಿ ಈಗ ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಮನೆಯಿಂದ ಪರಾರಿಯಾಗಿದ್ದಾನೆ.
ನಾಗರಾಜು ತನ್ನ ಮೊದಲ ಪತ್ನಿ ಮೃತಪಟ್ಟ ನಂತರ ವಿಜಯಕಲಾರನ್ನು ಎರಡನೇ ಮದುವೆಯಾಗಿದ್ದರು. ಇವರಿಗೆ ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ಮಕ್ಕಳಿದ್ದರು. ಆದರೆ ಈಗ ವಿಜಯಕಲಾ ತನ್ನ ಪ್ರೀತಿಗಾಗಿ ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಮುರಳಿಯೊಂದಿಗೆ ಪರಾರಿಯಾಗಿದ್ದಾಳೆ.
ಪತಿ ನಾಗರಾಜು ತನ್ನ ಹೆಂಡತಿಯನ್ನ ನನ್ನ ತಮ್ಮನ ಮಗ ಮುರುಳಿ ಪ್ರೀತಿ ಪ್ರೇಮ ಎಂದು ನಂಬಿಸಿ ಕರೆದುಕೊಂಡು ಹೋಗಿ ಎರಡು ತಿಂಗಳಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಾಗರಾಜು ಮಾನಕ್ಕೆ ಹೆದರಿ ಪತ್ನಿಯ ಬರುವಿಕೆಗೆ ಕಾಯುತ್ತಿದ್ದರು. ಆದರೆ ಆಕೆ ಬಾರದೇ ಇದ್ದುದ್ದರಿಂದ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಈಗ ದೂರು ದಾಖಲಿಸಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
https://youtu.be/w6uK90vT6Ys








Leave a Reply