ಮಗನ ಮೇಲೆ ವಿಕೃತಿ ಮೆರೆದ ತಂದೆ ಪ್ರಕರಣ- ಪತಿಯ ಕೃತ್ಯಕ್ಕೆ ಪತ್ನಿ ಸಮರ್ಥನೆ!

ಬೆಂಗಳೂರು: 10 ವರ್ಷದ ಮಗನ ಮೇಲೆ ತಂದೆ ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಾಯಿ ತನ್ನ ಗಂಡನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಮ್ಮ ಗಂಡ ಮಗುವಿಗೆ ಬೇಕು ಅಂತ ಹೊಡೆದಿಲ್ಲ. ಬುದ್ಧಿ ಕಳಿಸೋದಿಕೆ ಅಂತ ಹೊಡೆದಿದ್ದಾರೆ. ಶಾಲೆ ಮತ್ತು ಟ್ಯೂಷನ್ ಗೆ ಆತ ಸರಿಯಾಗಿ ಹೋಗುತ್ತಿರಲಿಲ್ಲ. ಈ ಘಟನೆ ಒಂದೂವರೆ ತಿಂಗಳ ಹಿಂದೆ ನಡೆದಿದೆ. ನನ್ನ ಮೊಬೈಲ್ ರಿಪೇರಿ ಮಾಡಲು ಕೊಟ್ಟಿದ್ದೆ. ಈ ವೇಳೆ ಯಾರೋ ಈ ವಿಡಿಯೋ ನೋಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಅಂತ ಹೇಳಿದ್ದಾರೆ.

ಆರೋಪಿ ತಂದೆ ಬಂಧನ: ತನ್ನ 11 ವರ್ಷದ ಮಗ ಸುಳ್ಳು ಹೇಳುತ್ತಾನೆಂದು ಮನಬಂದಂತೆ ಥಳಿಸಿರುವ ಆರೋಪಿ ತಂದೆ ಮಹೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದಾಗ, ನನ್ನ ಮಗ ನನ್ನ ಮಾತು ಕೇಳುತ್ತಿರಲಿಲ್ಲ. ಏನೇ ಹೇಳಿದ್ದರೂ ತಿರಸ್ಕರಿಸುತ್ತಿದ್ದ. ಹಾಗಾಗಿ ಅವನ ತಾಯಿ ಮುಂದೆನೇ ಆತನನ್ನು ನಾನು ಹೊಡೆಯುತ್ತಿದ್ದೆ. ಅದನ್ನು ಚಿತ್ರಿಕರಿಸಲು ನಾನೇ ನನ್ನ ಹೆಂಡತಿಗೆ ಹೇಳಿದ್ದೆ. ನನ್ನ ಮಗ ಮತ್ತೊಮ್ಮೆ ಗಲಾಟೆ ಮಾಡಿದರೆ ಆತನಿಗೆ ಹೆದರಿಸಲೆಂದು ಆ ವಿಡಿಯೋ ಮಾಡಲು ನಾನೇ ಹೇಳಿದ್ದೆ ಎಂದು ಮಹೇಂದ್ರ ತನ್ನ ತಪ್ಪೊಪ್ಪಿಕೊಂಡಿದ್ದಾನೆ.

ವಿಡಿಯೋದಲ್ಲೇನಿದೆ?: ಈ ಘಟನೆ ಕೆಂಗೇರಿ ಬಳಿಯ ಗ್ಲೋಬಲ್ ವಿಲೇಜ್ ಸಮೀಪದಲ್ಲಿ ನಡೆದಿದೆ. ಮಗ ಸುಳ್ಳು ಹೇಳುತ್ತಾನೆಂದು ಸಿಟ್ಟುಗೊಂಡ ಕ್ರೂರ ತಂದೆ ಆತನಿಗೆ ಮನಬಂದಂತೆ ಥಳಿಸಿದ್ದಾನೆ. ತನ್ನ ಕೈಯಲ್ಲಿ ಹೊಡೆಯುವುದಲ್ಲದೆ ಕಾಲಿನಿಂದ ತುಳಿದು ವಿಕೃತಿ ಮೆರೆದಿದ್ದಾನೆ. ಬಾಲಕ ಸುಳ್ಳು ಹೇಳಿಲ್ಲ ಎಂದು ಹೇಳುತ್ತಿದ್ದರೂ ಬಿಡದೇ ಚೆಂಡಿನಂತೆ ಬಿಸಾಡಿದ್ದಾನೆ. ಎಷ್ಟು ಸಲ ಸುಳ್ಳು ಹೇಳುತ್ತೀಯಾ ಎಂದು ತಂದೆ ಬೆಲ್ಟ್‍ನಲ್ಲಿ ಹೊಡೆದಿದ್ದಾನೆ. ಮಗ ಪದೇ ಪದೇ ಸುಳ್ಳು ಹೇಳ್ತಾನೆ ಎಂದು ತಂದೆ ಕಾಲಿನಲ್ಲಿ ಒದ್ದು, ವಿಕೃತವಾಗಿ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.

ವಿಡಿಯೋ ವೈರಲ್ ಆಗಿದ್ದು ಹೇಗೆ?: ಕೆಲವು ದಿನಗಳ ಹಿಂದೆ ಮೊಬೈಲ್ ಹಾಳಾಗಿದ್ದ ಕಾರಣ ರಿಪೇರಿಗೆಂದು ಮೊಬೈಲ್ ಶಾಪ್ ಗೆ ಕೊಟ್ಟಿದ್ದರು. ಈ ವೇಳೆ ಅಂಗಡಿಯವನು ಮೊಬೈಲ್ ಫ್ಲ್ಯಾಶ್ ಮಾಡುವಾಗ ಎಲ್ಲಾ ಫೋಟೋ, ವಿಡಿಯೋಗಳನ್ನು ತನ್ನ ಕಂಪ್ಯೂಟರ್‍ನಲ್ಲಿ ಹಾಕಿದ್ದಾರೆ. ಆಗ ಈ ವಿಡಿಯೋವನ್ನು ನೋಡಿದ್ದಾರೆ. ನೋಡಿದ ತಕ್ಷಣ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಂದೆಯ ಈ ಕ್ರೂರ ವರ್ತನೆಗೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು.

ಸದ್ಯ ಪ್ರಕರಣ ಸಂಂಬಂಧಿಸಿದಂತೆ ಕೆಂಗೇರಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಬಾಸ್ಕೊ (ಮಕ್ಕಳ ಮೇಲೆ ನಡೆಯುವ ಹಲ್ಲೆ ಬಗ್ಗೆ ತಿಳಿಸುವುದು) ಗೆ ಮಾಹಿತಿ ನೀಡಿದ್ದಾರೆ.

https://www.youtube.com/watch?v=e0WobI4CVJk

https://www.youtube.com/watch?v=j-PFEhOIDnc

Comments

Leave a Reply

Your email address will not be published. Required fields are marked *