ಮಗುವನ್ನು ದಡದ ಮೇಲೆ ನಿಲ್ಲಿಸಿ ಕಾಲುವೆಗೆ ಹಾರಿದ ತಾಯಿ!

Bellary

ಬಳ್ಳಾರಿ/ವಿಜಯನಗರ: ಮೂರು ವರ್ಷದ ಮಗುವನ್ನು ದಡದ ಮೇಲೆ ನಿಲ್ಲಿಸಿ ತಾಯಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ತಿಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸರಸ್ವತಿ(38) ಎಂದು ಗುರುತಿಸಲಾಗಿದ್ದು, ಮಗುವಿಗೆ ತಾಯಿ ಎಲ್ಲಿ ಎಂದು ಕೇಳಿದರೆ ಕಾಲುವೆ ಕಡೆಗೆ ತೋರಿಸುವ ದೃಶ್ಯ ಮನಕಲಕುವಂತಿದೆ. ಸದ್ಯ ಮಗುವಿನ ಹೇಳಿಕೆ ಆಧರಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

Bellary

ಸರಸ್ವತಿಯನ್ನು ಕಳೆದ ಹದಿನೆಂಟು ವರ್ಷದ ಹಿಂದೆ ಆಂಧ್ರದ ಬೊಮ್ಮನಾಳ್ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಲಾಗಿತ್ತು. ಮೂವರು ಮಕ್ಕಳಿರುವ ಸರಸ್ವತಿಯ ಆರೋಗ್ಯ ಕೆಲ ದಿನಗಳ ಹಿಂದೆ ಹದಗೆಟ್ಟಿರುವ ಹಿನ್ನೆಲೆ ತಮ್ಮ ತವರು ಮನೆಯಲ್ಲಿ ವಾಸವಾಗಿದ್ದರು. ಇದೀಗ ಮಹಿಳೆ ಕಾಣೆಯಾಗಿರುವುದರಿಂದ ಅವರ ತಂದೆ ಮಾರೆಪ್ಪ ಅವರು ಕುಡತಿನಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿದ್ದಾರೆ.

Bellary

ದಾರಿಯಲ್ಲಿ ಹೋಗುವವರು ಕಾಲುವೆ ಬಳಿ ಇರುವ ಮಗುವನ್ನು ಎತ್ತಿಕೊಂಡು ಅಮ್ಮ ಎಲ್ಲಿ ಎಂದರೆ ಮಗು ಕಾಲುವೆ ಕಡೆಗೆ ಬೆರಳು ಮಾಡಿ ತೋರಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋ ವೈರಲ್ ಆದ ಹಿನ್ನೆಲೆ ಮಗುವಿನ ತಾಯಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಕೊಲ್ಲಲು ಬಂದವ್ರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ್ಲು!

Comments

Leave a Reply

Your email address will not be published. Required fields are marked *