ಲಸಿಕೆ ಹಾಕಿಸಲು ಬಿಡಲ್ಲ – ಮಕ್ಕಳನ್ನೇ ಕಿಡ್ನ್ಯಾಪ್‌ಗೈದ ತಾಯಿ ವಿರುದ್ಧ ಮಾಜಿ ಪತಿ ದೂರು

ಮಾಡ್ರಿಡ್: ಕೋವಿಡ್-19 ವಿರುದ್ಧದ ಲಸಿಕೆಯನ್ನು ಮಕ್ಕಳಿಗೆ ಹಾಕಿಸುವುದರಿಂದ ತಪ್ಪಿಸಲು ತನ್ನ ಮಕ್ಕಳನ್ನೇ ತಾಯಿ ಅಪಹರಿಸಿದ್ದಾಳೆ ಎಂದು ಆರೋಪಿಸಿ ಆಕೆಯ ಮಾಜಿ ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಸ್ಪೇನ್‌ನಲ್ಲಿ ನಡೆದಿದೆ.

46 ವರ್ಷ ವಯಸ್ಸಿನ ಮಹಿಳೆಯನ್ನು ಬಿಟ್ಟು ಆಕೆಯ ಪತಿ ಬೇರೆ ಕಡೆ ವಾಸವಾಗಿದ್ದರು. ಇದಾದ ಬಳಿಕ ತನ್ನ ಮಕ್ಕಳನ್ನು ಆಕೆ ಅಪಹರಿಸಿದ್ದಾಳೆ ಎಂದು ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶೀಘ್ರವೇ ಹಸೆಮಣೆ ಏರಲಿರುವ ಸಲಿಂಗಿ ವೈದ್ಯೆಯರು

KIDNAP

ತಿಂಗಳಿಂದ ಮಕ್ಕಳು ನನ್ನ ಕಣ್ಣಿಗೆ ಕಾಣಿಸಿಲ್ಲ. ಈ ವೇಳೆ ಶಾಲೆಯಿಂದ ನನಗೊಂದು ಪತ್ರ ಬಂದಿತ್ತು. ನಿನ್ನ ಪತ್ನಿ ಮಕ್ಕಳನ್ನು ಶಾಲೆಯಿಂದ ಬಿಡಿಸಲು ಯೋಚಿಸಿದ್ದಾರೆ. ಮಕ್ಕಳು ಕೋವಿಡ್‌ ಲಸಿಕೆ ಪಡೆಯುವುದರಿಂದ ತಪ್ಪಿಸಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು ಎಂದು ಮಾಜಿ ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಆಕೆಯನ್ನು ವಿಚಾರಣೆಗೆ ಒಳಪಡಿಸುವಂತೆ ಕೋರ್ಟ್‌ ಆದೇಶಿಸಿದೆ. ನಂತರ ಇಬ್ಬರೂ ಮಕ್ಕಳನ್ನು ತಂದೆಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್‍ಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿದ ಪೊಲೀಸ್

jail

ಕಳೆದ ಡಿಸೆಂಬರ್‌ 15ರಿಂದ 5-11 ವರ್ಷದ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನವನ್ನು ಸ್ಪೇನ್‌ ಸೇರಿದಂತೆ ಅನೇಕ ಯೂರೋಪ್‌ ರಾಷ್ಟ್ರಗಳು ಆರಂಭಿಸಿವೆ.

Comments

Leave a Reply

Your email address will not be published. Required fields are marked *