ರೇಪ್ ಕೇಸ್ ಹಿಂಪಡೆಯುವುದಕ್ಕೆ 50 ಲಕ್ಷ ರೂ.ಗೆ ಬೇಡಿಕೆ – ಖತರ್ನಾಕ್ ತಾಯಿ, ಮಗಳು ಅಂದರ್

ಚಂಡೀಗಢ: ಅತ್ಯಾಚಾರ ಪ್ರಕರಣವನ್ನು ಹಿಂಪಡೆಯ ಬೇಕೆಂದರೆ 50 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ತಾಯಿ, ಮಗಳನ್ನು ಗುರುಗ್ರಾಮದ ಪೊಲೀಸರು ಬಂಧಿಸಿದ್ದಾರೆ.

ನೀಡಿದ್ದ ದೂರನ್ನು ಹಿಂಪಡೆಯಬೇಕೆಂದರೆ 50 ಲಕ್ಷ ರೂಪಾಯಿ ಕೊಡಬೇಕೆಂದು ಯುವತಿ ಬೇಡಿಕೆ ಇಟ್ಟಿದ್ದಾಳೆ. ಬಳಿಕ ಆರೋಪಿಯ ಸಹೋದರ ಯುವತಿ ಹಾಗೂ ಆಕೆಯ ತಾಯಿಯ ವಿರುದ್ಧ ಸೆಕ್ಟರ್ 51ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಗುರುಗ್ರಾಮ್ ಪೊಲೀಸರು ಯುವತಿಯನ್ನು ಭಿವಾನಿಯಲ್ಲಿ ಬಂಧಿಸಿದ್ದು, ಆಕೆಯ ತಾಯಿಯನ್ನು ಗುರುಗ್ರಾಮದ ಸೆಕ್ಟರ್ 47ರಲ್ಲಿ ಬಂಧಿಸಿದ್ದಾರೆ. ಜೊತೆಗೆ ತಾಯಿ ಹಾಗೂ ಮಗಳ ವಿರುದ್ಧ ಸುಳ್ಳು ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಡತಗಳು ಕಾಣಿಯಾಗಿವೆ : ಭಾ.ಮಾ.ಹರೀಶ್

ವಿಚಾರಣೆ ವೇಳೆ ಯುವತಿ ತಾಯಿ ಬಳಿ ಇದ್ದ 1 ಲಕ್ಷ ರೂ. ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ದಾಖಲಿಸಲಾಗಿರುವ ಅತ್ಯಾಚಾರ ಪ್ರಕರಣ ಹಿಂಪಡೆಯಬೇಕೆಂದರೆ ಹಣಕ್ಕಾಗಿ ಭೇಡಿಕೆ ಇಟ್ಟಿರಿವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೊನೆಗೆ 30 ಲಕ್ಷ ರೂ.ಗೆ ಡೀಲ್ ಒಕೆ ಮಾಡಿಕೊಂಡಿದ್ದು, ಸ್ವಲ್ಪ ಹಣವನ್ನು ನೀಡಲು ಯುವತಿ ಮತ್ತು ಆಕೆಯ ತಾಯಿಗೆ ರೆಸ್ಟೋರೆಂಟ್‍ನಲ್ಲಿ ಭೇಟಿಯಾಗಲು ತಿಳಿಸಿದ್ದರು. ಹೀಗಾಗಿ ರೆಸ್ಟೋರೆಂಟ್‍ಗೆ ತಾಯಿ ಮಗಳು ಬಂದಿರುವ ವಿಚಾರವ ತಿಳಿದ ಪೊಲೀಸರು ನಂತರ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದನ್ನೂ ಓದಿ: ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

Live Tv

Comments

Leave a Reply

Your email address will not be published. Required fields are marked *