ಮೈಸೂರು: ವರದಕ್ಷಣೆ ಕಿರುಕುಳ ತಾಳಲಾರದೇ ತಾಯಿ ತನ್ನ ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮಹದೇವಪುರದಲ್ಲಿ ನಡೆದಿದೆ.
24 ವರ್ಷದ ಗೌರಮ್ಮ ತನ್ನ 2 ವರ್ಷದ ಮಗ ನಿಯಾಲ್ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆ ಆರ್ ಪೇಟೆ ಮೂಲದ ಗೌರಮ್ಮ, 3 ವರ್ಷದ ಹಿಂದೆ ಮೈಸೂರಿನ ಲೋಹಿತ್ ರನ್ನು ಮದುಮೆಯಾಗಿದ್ದರು. ಪತಿ ಲೋಹಿತ್ ಮಾಲೂರಿನಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದರು. ಮದುವೆ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ನೀಡಲಾಗಿದ್ದು, ಆದರೂ ಹಣಕ್ಕಾಗಿ ಪತಿ ಮನೆಯಿಂದ ಕಿರುಕುಳ ನೀಡಲಾಗಿತ್ತು. ಹಾಗಾಗಿ ಕಿರುಕುಳ ತಾಳಲಾರದೇ ಗೌರಮ್ಮ ಕೊಠಡಿಯೊಳಗೆ ಹೋಗಿ ಮೊದಲು ಮಗ ನಿಯಾಲ್‍ಗೆ ಬೆಂಕಿ ಹಚ್ಚಿ, ಬಳಿಕ ತಾನೂ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply