ಮೈಸೂರು: ಟಯರ್ ಸ್ಫೋಟಗೊಂಡು ತಾಯಿ, ಮಗ ಕಾರಿನಲ್ಲಿಯೇ ಸಾವನ್ನಪ್ಪಿದ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ನಡೆದಿದೆ.
ದೈವಿಕ್(12), ಗುಣಲಕ್ಷ್ಮಿ(35) ಮೃತ ದುರ್ದೈವಿಗಳು. ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ಕಾರಿನಲ್ಲಿ ಪತಿ ಜಗದೀಶ್ ಜೊತೆಗೆ ಗುಣಲಕ್ಷ್ಮಿ ಮತ್ತು ಮಗ ದೈವಿಕ್ ಹೋಗುತ್ತಿದ್ದರು.
ಇಂದು ಮುಂಜಾನೆ 4.30 ಸಮಯದಲ್ಲಿ ಕಾರಿನ ಮುಂಭಾಗದ ಟೈಯರ್ ಗಳು ಸ್ಫೋಟ ಆಗಿದೆ. ಈ ಪರಿಣಾಮ ಕಾರು ಕಂಬಕ್ಕೆ ಗುದ್ದಿದೆ. ಕಾರು ಓಡಿಸುತ್ತಿದ್ದ ಜಗದೀಶ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಗುಣಲಕ್ಷ್ಮಿ ಮತ್ತು ದೈವಿಕ್ ಮಾತ್ರ ಕಾರಿನಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: 15 ಸಾವಿರ ರೂ., ದಾಖಲಾತಿಗಳಿದ್ದ ಪರ್ಸ್ ಹಿಂದಿರುಗಿಸಿದ ಕಾಲೇಜಿನ ವಿದ್ಯಾರ್ಥಿಗಳು
ಈ ಸಂಬಂಧ ಮೈಸೂರಿನ ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply