ಬೆಂಗಳೂರು: ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿಯೂ ಕೂಡ ಮೃತಪಟ್ಟಿರುವ ಘಟನೆ ನಗರದ ಶೇಷಾದ್ರಿಪುರಂನಲ್ಲಿ ನಡೆದಿದೆ.
ವಳ್ಳಿಯಮ್ಮ (83) ಮತ್ತು ರವಿಚಂದ್ರ (62) ಸಾವಿನಲ್ಲೂ ಒಂದಾದ ತಾಯಿ-ಮಗ. ವಳ್ಳಿಯಮ್ಮ ಮಗ ರವಿಚಂದ್ರ ವೃತ್ತಿಯಲ್ಲಿ ಕ್ಯಾಟರಿಂಗ್ ಬ್ಯುಸಿನೆಸ್ ನಡೆಸುತ್ತಿದ್ದರು. ಎರಡು ದಿನಗಳ ಹಿಂದೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ತೆರಳುತ್ತಿದ್ದರು.
ಓಲಾ ಕ್ಯಾಬ್ ನಲ್ಲಿ ತೆರಳುತಿದ್ದ ವೇಳೆ ರವಿಚಂದ್ರ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಓಲಾ ಚಾಲಕ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದನು. ಹೃದಯ ಬಡಿತದ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ಸುಮಾರು 12:30ಕ್ಕೆ ರವಿಚಂದ್ರ ಮೃತಪಟ್ಟಿದ್ದಾರೆ.
ತಕ್ಷಣವೇ ಈ ವಿಚಾರವನ್ನು ತಿಳಿಸಿದರೆ ಗಾಬರಿಯಾಗುತ್ತಾರೆ ಎಂದು ರವಿಚಂದ್ರನ ತಾಯಿಗೆ ನಿಧಾನವಾಗಿ ಸಂಬಂಧಿಕರು ಮಗನ ಸಾವಿನ ವಿಚಾರವನ್ನು ತಿಳಿಸಿದ್ದರು. ಆದರೂ ಮಗನ ಅಗಲಿಕೆಯಿಂದ ನೊಂದ ತಾಯಿಗೂ ಕೂಡ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ನೀಡುವ ಮೊದಲೇ ತಾಯಿ ವಳ್ಳಿಯಮ್ಮ ಕೂಡ ಮೃತಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply