ಬಾಕ್ಸ್ ಬಳೆಗಾಗಿ ಜಗಳ- ಕಟ್ಟಡದಿಂದ ಹಾರಿ ತಾಯಿ ಆತ್ಮಹತ್ಯೆ

– ಫಿನಾಯಿಲ್ ಕುಡಿದು ಮಗಳು ಆಸ್ಪತ್ರೆಗೆ ದಾಖಲು

ಮುಂಬೈ: ಬಳೆಗಾಗಿ ನಡೆದ ಜಗಳ ತಾಯಿಯ ಸಾವಿನಲ್ಲಿ ದುರಂತ ಅಂತ್ಯ ಕಂಡ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

ಈ ಘಟನೆ ಭಾನುವಾರ ಸಂಜೆ ಓಶಿವಾರದ ಲೋಕಂದ್ವಾಲಾ ಮಾರುಕಟ್ಟೆ ಬಳಿ ನಡೆದಿದೆ. ಮೃತಳನ್ನು ಶಶಿ ಕೋಮಲ್ ಸಾಗರ್ ಎಂದು ಗುರುತಿಸಲಾಗಿದೆ.

ಶಶಿ ಕೋಮಲ್ ಸಾಗರ್ ಹಾಗೂ ಆಕೆಯ ಮಗಳು ಪ್ರಿಯಾ ಒಂದು ಬಾಕ್ಸ್ ಬಳೆಗಳಿಗಾಗಿ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಜಗಳ ತಾರಕಕ್ಕೇರಿ ಸಿಟ್ಟಿನಿಂದ ಮನೆಯ ಸದಸ್ಯರೆದುರೇ ಮಗಳು ಫಿನಾಯಿಲ್ ಕುಡಿದಿದ್ದಾಳೆ.

ಕೂಡಲೇ ಮನೆಯವರೆಲ್ಲರೂ ಸೇರಿ ಪ್ರಿಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬಂದಾಗ ಶಶಿ ಮನೆಯಲ್ಲಿ ಇರಲಿಲ್ಲ. ಇದರಿಂದ ಗಾಬರಿಗೊಂಡ ಮನೆ ಸದಸ್ಯರು ಶಶಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಎರಡನೇ ಮಹಡಿಯಲ್ಲಿ ಶಶಿ ದೇಹ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಶಿ ಕಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಈ ಸಂಬಂಧ ಆಕಸ್ಮಿಕ ಘಟನೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದಯಾನಂದ್ ಬಂಗಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *