ಇಶಾನ್ ಕಿಶನ್‍, ಚಹರ್‌ಗಿಂತಲೂ ಹೆಚ್ಚಿನ ಮೊತ್ತಕ್ಕೆ ಬಿಕರಿಯಾದ ಆಟಗಾರರ ಪಟ್ಟಿ

ಬೆಂಗಳೂರು: ಬಹು ನಿರೀಕ್ಷಿತ 2022ರ ಐಪಿಎಲ್ ಆಟಗಾರರ ಹರಾಜು ಪೂರ್ಣಗೊಂಡಿದೆ. ಕೆಲ ಆಟಗಾರರು ದುಬಾರಿ ಮೊತ್ತಕ್ಕೆ ಬಿಕರಿಯಾದರೆ ಇನ್ನೂ ಕೆಲ ಆಟಗಾರರು ಅನ್‍ಸೋಲ್ಡ್ ಆಗಿ ನಿರಾಸೆ ಅನುಭವಿಸಿದ್ದಾರೆ.

ಈ ನಡುವೆ 2 ದಿನಗಳ ಹರಾಜಿನಲ್ಲಿ ಇಶಾನ್ ಕಿಶನ್ 15.5 ಕೋಟಿ ರೂ. ಮತ್ತು ದೀಪಕ್ ಚಹರ್ 14 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದರು. ಆದರೆ, ಐಪಿಎಲ್‍ನಲ್ಲಿ ಇವರಿಗಿಂತಲೂ ಹೆಚ್ಚಿನ ಮೊತ್ತ ಪಡೆದ ಆಟಗಾರರೂ ಆಡಳಿದ್ದಾರೆ. ಇದನ್ನೂ ಓದಿ: IPL Auction -15.25 ಕೋಟಿಗೆ ಇಶಾನ್ ಕಿಶನ್ ಸೇಲ್‌

ಹೌದು ಮೆಗಾ ಹರಾಜಿಗೂ ಮುನ್ನ ಎಲ್ಲಾ ತಂಡಗಳಿಗೂ ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಅವಕಾಶವಿತ್ತು. ಇದರಲ್ಲಿ ಕೆ.ಎಲ್ ರಾಹುಲ್‍ಗೆ ಲಕ್ನೋ ಫ್ರಾಂಚೈಸ್ ಬರೋಬ್ಬರಿ 17 ಕೋಟಿ ರೂ. ನೀಡಿತ್ತು. ಇದು ಐಪಿಎಲ್‍ನ ಇತಿಹಾಸದಲ್ಲೇ ಆಟಗಾರನೊಬ್ಬ ಪಡೆದ ಹೆಚ್ಚಿನ ಮೊತ್ತವಾಗಿದೆ.  ಇದನ್ನೂ ಓದಿ: IPL ಹರಾಜಿನಲ್ಲಿ ಅನ್‍ಸೋಲ್ಡ್ ಆದ ಸ್ಟಾರ್ ಆಟಗಾರರು

ರಾಹುಲ್ ಬಳಿಕ ರೋಹಿತ್ ಶರ್ಮಾ-ಮುಂಬೈ ಇಂಡಿಯನ್ಸ್, ರವೀಂದ್ರ ಜಡೇಜಾ – ಚೆನ್ನೈ ಸೂಪರ್ ಕಿಂಗ್ಸ್, ಮತ್ತು ರಿಷಭ್ ಪಂತ್ – ಡೆಲ್ಲಿ ಕ್ಯಾಪಿಟಲ್ಸ್ ತಲಾ 16 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಈ ಮೂಲಕ ಹರಾಜಿನಲ್ಲಿ ಇಶಾನ್ ಕಿಶನ್‍ಗಿಂತಲೂ ಹೆಚ್ಚಿನ ಮೊತ್ತಕ್ಕೆ ಈ ಮೊದಲೇ ತಂಡ ಸೇರಿದ್ದ ಆಟಗಾರರು ಮುಂದಿನ ಐಪಿಎಲ್‍ನಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬ ಕುತೂಹಲವಿದೆ. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

 

 

Comments

Leave a Reply

Your email address will not be published. Required fields are marked *