ಬೆಂಗ್ಳೂರಿನಾದ್ಯಂತ ಬರೋಬ್ಬರಿ 8 ಸಾವಿರ ಸಿಸಿಟಿವಿ ಅಳವಡಿಕೆ

ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಗಲ್ಲಿಗಲ್ಲಿಗೂ ಮುಂಜಾಗೃತಾ ಕ್ರಮವಾಗಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 5 ಸಾವಿರ ಸಿಸಿಟಿವಿಗಳು ಎಲೆಕ್ಷನ್‍ಗಾಗಿ ಕೆಲಸ ಮಾಡಲಿದೆ. ಬಿಬಿಎಂಪಿ ವತಿಯಿಂದ 198 ವಾರ್ಡ್ ಗಳಲ್ಲಿ 4 ಸಾವಿರ ಸಿಸಿಟಿವಿಗಳಿವೆ. ಇತ್ತ ಟ್ರಾಫಿಕ್ ಜಂಕ್ಷನ್ ಗಳಲ್ಲೂ 1 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಇದೆ. ಈ ಎಲ್ಲ ಕ್ಯಾಮೆರಾಗಳು ಚುನಾವಣೆಗಾಗಿ ಕೆಲಸ ಮಾಡುತ್ತವೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಜಂಟಿಯಾಗಿ ಚರ್ಚಿಸಿ ಈ ನೂತನ ಐಡಿಯಾ ಹುಡುಕಿದ್ದಾರೆ.

ಪಾಲಿಕೆ ಕಳೆದ 2 ವರ್ಷಗಳಿಂದ ಕ್ರಿಮಿನಲ್ ಮೊಕದ್ದಮೆಗಳ ಸಾಕ್ಷಿಗಾಗಿ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಸಿತ್ತು. ಪ್ರತಿ ವಾರ್ಡ್ ಗೂ 1 ಕೋಟಿ ರೂ. ಅನುದಾನದಂತೆ ವಾರ್ಡ್ ವೊಂದರಲ್ಲಿ ಕನಿಷ್ಠ 60 ಕ್ಯಾಮೆರಾ ಹಾಕಲಾಗಿದೆ. ಜೊತೆಗೆ ಸಿಗ್ನಲ್ ಜಂಪ್ ತಪ್ಪಿನ ಸಾಕ್ಷಿಗಾಗಿ ಟ್ರಾಫಿಕ್ ಸಿಗ್ನಲ್ ಗಳ ಬಳಿ ಈ ಹಿಂದೆಯೇ ಸಿಸಿಟಿವಿ ಇತ್ತು. ಈಗ ಈ ಎಲ್ಲ ಕ್ಯಾಮೆರಾಗಳು ಬಿಗ್ ಬಾಸ್ ನಂತೆ ಎಲೆಕ್ಷನ್ ಡ್ಯೂಟಿ ಮಾಡಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಸಿಸಿಟಿವಿ ಅಳವಡಿಕೆಯಿಂದ ಚುನಾವಣೆ ಸಮಯದಲ್ಲಿ ಮನಬಂದಂತೆ ಮತದಾರರಿಗೆ ಸೀರೆ, ಬಟ್ಟೆ, ದುಡ್ಡು ಇನ್ನಿತರೆ ವಸ್ತುಗಳನ್ನು ಕೊಡುವುದಕ್ಕೆ ಆಗಲ್ಲ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತರ ಘಟನೆ ನಡೆಯಬಾದರೆಂದು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *