ಹೈದರಾಬಾದ್: ಆಂಧ್ರದ ಕರ್ನೂಲಿನಲ್ಲಿ ದುರಂತಕ್ಕೀಡಾದ ಬಸ್ ಮೇಲೆ 16 ನಿಮಯ ಉಲ್ಲಂಘನೆ ಕೇಸ್‌ಗಳಿದ್ದು, ಒಟ್ಟು 23 ಸಾವಿರ ರೂ.ಗೂ ಅಧಿಕ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ತೆಲಂಗಾಣ ರಾಜ್ಯದಲ್ಲಿ ದುರಂತಕ್ಕೀಡಾದ ಖಾಸಗಿ ಬಸ್ ಮೇಲೆ ಟ್ರಾಫಿಕ್ ನಿಯಮ ಉಲ್ಲಂಘನೆಯಡಿ 16 ಕೇಸ್‌ಗಳು ದಾಖಲಾಗಿವೆ. ಅತಿವೇಗದಲ್ಲಿ ಚಾಲನೆ, ಒನ್ ವೇ ಎಂಟ್ರಿ ಸೇರಿದಂತೆ ಹಲವು ನಿಯಮ ಉಲ್ಲಂಘಿಸಿದ ಹಿನ್ನೆಲೆ ಬಸ್ ವಿರುದ್ಧ 16 ದಂಡದ ಚಲನ್ ಬಾಕಿಯಿದ್ದು, 3,120 ರೂ. ದಂಡ ವಿಧಿಸಲಾಗಿದೆ. ಆದರೆ ಈವರೆಗೂ ದಂಡದ ಮೊತ್ತ ಪಾವತಿಯಾಗಿಲ್ಲ.ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ
ಅದಲ್ಲದೇ ಬಸ್ ವಿರುದ್ಧ ಅಪಾಯಕಾರಿಯಾಗಿ ಚಾಲನೆ ಮತ್ತು ಅನಧಿಕೃತ ಮಾರ್ಗದಲ್ಲಿ ಸಂಚಾರ ಎಂದು ಸಾರ್ವಜನಿಕ ದೂರುಗಳು ದಾಖಲಾಗಿದೆ.
ಗುರುವಾರ (ಅ.23) ಮಧ್ಯರಾತ್ರಿ 2:45ರ ಸುಮಾರಿಗೆ ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ಎಸಿ ಬಸ್ ಆಂಧ್ರದ ಕರ್ನೂಲ್ ಬಳಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವಾದ ಬಳಿಕವೂ ಡ್ರೆöÊವರ್ ಬಸ್ ನಿಲ್ಲಿಸದೇ ಸವಾರನ ಸಮೇತ ಬೈಕ್ ಅನ್ನು ಸುಮಾರು 300 ಮೀಟರ್ ಎಳೆದೊಯ್ದಿದ್ದಾನೆ. ಈ ವೇಳೆ, ಬೈಕ್‌ನಲ್ಲಿದ್ದ ಪೆಟ್ರೋಲ್ ಚೆಲ್ಲಿ ಬಸ್ ಅಡಿ ಬೆಂಕಿ ಹೊತ್ತಿಕೊಂಡಿದೆ. ನಂತರ ಇಡೀ ಬಸ್‌ಗೆ ಬೆಂಕಿ ಹಬ್ಬಿದೆ. ಎಸಿ ಬಸ್ ಆಗಿದ್ದ ಕಾರಣ ಕ್ಷಣಾರ್ಧದಲ್ಲಿ ಇಡೀ ಬಸ್‌ಗೆ ಬೆಂಕಿ ಆವರಿಸಿದೆ.
ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದು, 24 ಜನರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರೂ ಕೂಡ ಸುಟ್ಟಗಾಯಗಳಿಂದಾಗಿ ಒದ್ದಾಡುತ್ತಿದ್ದಾರೆ.ಇದನ್ನೂ ಓದಿ: Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!
